ಕುಂದಾಪುರ : ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ, ಅಂಚೆ ಮುತ್ತು ಬ್ಯಾಂಕ್ ಆಫ್ ಬರೋಡ ಸಲ್ವಾಡಿ ಆಶ್ರಯದಲಿ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಸರ್ಕಾರದ 70ಕ್ಕೂ ಮಿಕ್ಕಿ ಯೋಜನೆಗಳು ಜನಸಾಮಾನ್ಯರಿಗೆ ತಲುಪುವ ನಿಟ್ಟಿನಲ್ಲಿ ಹಾಗೆ ಯಾವ ಯೋಜನೆ ಜನಸಾಮಾನ್ಯರಿಗೆ ತಲುಪಲಿಲ್ಲ ಆ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ 2024ರ ನರೇಂದ್ರ ಮೋದಿಯವರ ಅಭಿವೃದ್ಧಿಯ ಕ್ಯಾಲೆಂಡರ್ ಬಿಡುಗಡೆ ಮಾಡಿದರು ಹಾಗೂ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಉಜ್ವಲ್ ಯೋಜನಾ ಫಲಾನುಭವಿಗೆ ಬಾಂಡ್ ವಿತರಿಸಲಾಯಿತು ಡ್ರೋನ್ ಪ್ರಾತ್ಯಕ್ಷಿಕೆ ನೆರವೇರಿತು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಜಯಂತಿ ಶೆಡ್ತಿ ಅಧ್ಯಕ್ಷತೆ ವಹಿಸಿದ್ದರು
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರಾದ ಅರುಣ್ ಹೆಗ್ಡೆ, ಮತ್ತು ಸರ್ವ ಸದಸ್ಯರು ಉಪಸಿತರಿದ್ದರು ಕಾರ್ಯಕ್ರಮದ ಪ್ರಸ್ತಾವಿಕ ಮಾತುಗಳನ್ನು ಶ್ರೀಮತಿ ಮೀರಾ.ಜಿ. ಸೀನಿಯರ್ ಎಫ್.ಎಲ್.ಸಿ. ಆರ್ಥಿಕ ಸಾಕ್ಷರತಾ ಕೇಂದ್ರ ಉಡುಪಿ, ಜಿಲ್ಲಾ ಆರೋಗ್ಯ ಮಿತ್ರ ಸೃಜನ್ ಮಾಲಾ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮವರ ಧನಂಜಯ್, ರುಡ್ ಸೆಟ್ ಉಡುಪಿ ಡೈರೆಕ್ಟರ್ ಲಕ್ಷ್ಮೀಶ್, ಅಂಚೆ ಇಲಾಖೆ ಕುಂದಾಪುರ ಮಹೇಂದ್ರ, ಬ್ಯಾಂಕ್ ಆಫ್ ಬರೋಡ ಸಲ್ವಾಡಿ ಶಾಖೆಯ ಸಿಬ್ಬಂದಿ ಹಾಗೂ ನೂರಾರು ಗ್ರಾಮಸ್ಥರು ಉಪಸಿತರಿದ್ದರು. ಬ್ಯಾಂಕ್ ಆಫ್ ಬರೋಡ ಸಲ್ವಾಡಿ ಮ್ಯಾನೇಜರ್ ಸುನಿಲ್ ಕುಮಾರ್ ಸರ್ವರನ್ನು ಸ್ವಾಗತಿಸಿದರು, ಗ್ರಾಮ ಪಂಚಾಯತಿನ ಕಾರ್ಯದರ್ಶಿ ಚಂದ್ರಕಾಂತ್ ಕಾರ್ಯಕ್ರಮದ ನಿರೂಪಿಸಿ, ವಂದನಾರ್ಪಣೆಗೈದರು

