Home » ಕರ್ನಾಟಕ ಪ್ರಗತಿಪರ ಸೌಹಾರ್ಧ ಸಹಕಾರಿ ಸಂಘದ ಮಹಾಸಭೆ
 

ಕರ್ನಾಟಕ ಪ್ರಗತಿಪರ ಸೌಹಾರ್ಧ ಸಹಕಾರಿ ಸಂಘದ ಮಹಾಸಭೆ

ಶೇಕಡ 9 ಡಿವಿಡೆಂಡ್‌ ಘೋಷಣೆ

by Kundapur Xpress
Spread the love

ಕುಂದಾಪುರ : ನಗರದ ವೈಶಾಲಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಪ್ರಗತಿಪರ ಸೌಹಾರ್ಧ ಸಹಕಾರಿ ಸಂಘದ ವಾರ್ಷೀಕ ಮಹಾಸಭೆಯು ವೈಶಾಲಿ ಕಾಂಪ್ಲೆಕ್ಸ್ ನ ಮಿನಿ ಸಭಾಂಗಣದಲ್ಲಿ ಜರುಗಿತು

ಸಹಕಾರಿ  ಸಂಘಗಳ ಸಹಾಯಕ ನಿವೃತ್ತ ನಿಬಂಧಕರಾದ ಎಸ್‌ ವಿ ಅರುಣ್‌ ಕುಮಾರ್‌ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು

ಸಂಘದ ಅಧ್ಯಕ್ಷರಾದ ರಾಮಚಂದ್ರ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸರ್ವ ಸದಸ್ಯರು ಹಾಗೂ ನಿರ್ಧೇಶಕರು ಹಾಗೂ ಸಿಬ್ಬಂಧಿ ವರ್ಗದ ಸಹಕಾರದಿಂದ ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ದಿ ಹೊಂದುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಶೇಕಡ 9 ಡಿವಿಡೆಂಡ್‌ ಘೋಷಿಸಿದರು

ಈ ಸಂದರ್ಭದಲ್ಲಿ ನಿವೃತ್ತ ಸಹಕಾರಿ  ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್ ವಿ ಇವರನ್ನು ಸಂಸ್ಥೆಯ ವತಿಯಿಂದ ಅಭಿನಂಧಿಸಲಾಯಿತು

ಸಂಘದ ಉಪಾಧ್ಯಕ್ಷರಾದ ಪ್ರಕಾಶ್ ಕೆ ಅವರು ಸಂಸ್ಥೆ ಬೆಳೆದು ಬಂದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು 

ವೇದಿಕೆಯಲ್ಲಿ ನಿರ್ದೇಶಕರಾದ ಗೋಪಾಲ್ ವಿ, ಸುರೇಶ್ ಪೂಜಾರಿ ,ಲೋಕೇಶ್ ಪೂಜಾರಿ, ರಮೇಶ್ ಪ್ರಭು, ಉಮೇಶ್ ಪೂಜಾರಿ, ರಾಘವೇಂದ್ರ ಪೂಜಾರಿ, ಗುರುರಾಜ್, ಮಂಜುನಾಥ್ ಪೂಜಾರಿ, ಗಂಗಾಧರ್ ಪೂಜಾರಿ ಹಾಗೂ ಸಂಸ್ಥೆಯ ಕಾರ್ಯಾ ನಿರ್ವಹಣಾಧಿಕಾರಿ ಅಶೋಕ್ ಪೂಜಾರಿ ಉಪಸ್ಥಿತರಿದ್ದರು

ಪ್ರಕಾಶ್ ಕೆ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಮಚಂದ್ರ ಪೂಜಾರಿ ಸ್ವಾಗತಿಸಿ ಅಶೋಕ್ ಪೂಜಾರಿ ಧನ್ಯವಾದವಿತ್ತರು

 

Related Articles

error: Content is protected !!