Home » ಕೊರಗ ಸಮುದಾಯಕ್ಕೆ ಮನೆ ನಿರ್ಮಾಣ ,ಸಂಸದರಿಂದ ಪರಿಶೀಲನೆ
 

ಕೊರಗ ಸಮುದಾಯಕ್ಕೆ ಮನೆ ನಿರ್ಮಾಣ ,ಸಂಸದರಿಂದ ಪರಿಶೀಲನೆ

by Kundapur Xpress
Spread the love

ಕೋಟ : ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ಇಲ್ಲಿನ ಕೊರಗ ಕಾಲೋನಿಯಲ್ಲಿ ವಾಸ್ತವ್ಯ ಹೊಂದಿದ ಸುಮಾರು ಎಂಟು ಕೊರಗ ಸಮುದಾಯದ ಕುಟುಂಬಗಳಿಗೆ ಮನೆ ನಿರ್ಮಿಸುತ್ತಿದ್ದು ಈ ಹಿನ್ನಲ್ಲೆಯಲ್ಲಿ ಶನಿವಾರ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಕೊರಗ ಸಮುದಾಯದವರೊಂದಿಗೆ ಸುಮಾರು ಅರ್ಥ ತಾಸು ಸಮುದಾಯಕ್ಕೆ ಸರಕಾರದಿಂದ ಸಿಗುವ ಸವಲತ್ತುಗಳ ಹಾಗೂ ಅವರ ಜೀವನ ನಿರ್ವಹಣೆ ಕುರಿತು ಚರ್ಚಿಸಿದರು.ಅಲ್ಲದೆ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್‌ರವರೊAದಿಗೆ ಮನೆ ನಿರ್ಮಾಣದ ಮಾಹಿತಿ ಪಡೆದು ಪೂರ್ಣಗೊಳಿಸಲು ಬೇಕಾದ ತಯಾರಿಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್,ಉಪಾದ್ಯಕ್ಷೆ ಸರಸ್ವತಿ ಪೂಜಾರಿ,ಸದಸ್ಯರಾದ ಪ್ರಮೋದ ಹಂದೆ,ಪ್ರಕಾಶ ಹಂದಟ್ಟು,ವಾಸು ಪೂಜಾರಿ,ವಿದ್ಯಾ ಸಾಲಿಯಾನ,ರವೀಂದ್ರ ತಿಂಗಳಾಯ,ಸೀತಾ,ಮಾಜಿ ಸದಸ್ಯ ರಾಜೇಶ್ ಪೂಜಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಹೇಗಿದೆ ಯೋಜನೆ ,ಅರ್ಧದಷ್ಟು ಕಾಮಗಾರಿ ಪೂರ್ಣ
ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಬಾರಿಕೆರೆಯ ಕೆ.ಕೆ ಬೆಟ್ಟುವಿನಲ್ಲಿ ವಾಸ್ತವ್ಯವಿರುವ ಸುಮಾರು ಎಂಟುಕ್ಕೂ ಅಧೀಕ ಕುಟುಂಬಗಳು ಗುಡಿಸಲು ಮನೆಯಲ್ಲಿ ವಾಸಿಸುತ್ತಿದ್ದು ಆ ಕೇರಿ ಅಭಿವೃದ್ಧಿಗೊಳ್ಳದೆ ಅಸಾಯಕ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಆದರೆ ಇದನ್ನು ಗಮನಿಸಿದ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷರನ್ನೊಳಗೊಂಡ ತಂಡ ಆ ಎಲ್ಲಾ ಕುಟುಂಬಗಳಿಗೆ ಸುಸಜ್ಜಿತ ಮನೆ ನಿರ್ಮಿಸಲು ಪಣತೊಟ್ಟಿತು.ಇದಾದ ನಂತರ ಮನೆ ನಿರ್ಮಾಣದ ಕಾಮಗಾರಿಗಾಗಿ ದಾನಿಗಳ ಮೊರೆಹೋಗಿದ್ದು ಆನಂದ್ ಸಿ ಕುಂದರ್ ಸಹಿತ ಹಲವು ಉದ್ಯಮಿಗಳ,ಸಂಸ್ಥೆಗಳ ಸಹಕಾರ ಪಡೆದು ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಇಡೀ ಕೊರಗ ಕಾಲೋನಿಯ ಸಮುದಾಯಕ್ಕೆ ನವಕಾಯಕಲ್ಪಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಇದರ ಭಾಗವಾಗಿ ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಇನ್ನಷ್ಟು ಕಾಮಗಾರಿಗೆ ವೇಗ ನೀಡಲಿದೆ.

ಸಹಕಾರಕ್ಕೆ ಮನವಿ
ಇಲ್ಲಿನ ಈ ಪರಿಸರದ ಕೊರಗ ಸಮುದಾಯದ ಎಂಟು ಮನೆಗಳ ಪೂರ್ಣಕಾಯಕಲ್ಪಕ್ಕೆ ಆರ್ಥಿಕ ಕ್ರೋಡೀಕರಣದ ಅವಶ್ಯಕತೆ ಇದ್ದು ಈ ಬಗ್ಗೆ ಕೋಟತಟ್ಟು ಗ್ರಾಮಪಂಚಾಯತ್ ದಾನಿಗಳ ಸಹಕಾರಕ್ಕೆ ಮನವಿ ಮಾಡಿದೆ.

ಮೇ ನಲ್ಲಿ ಗೃಹ ಲೋಕಾರ್ಪಣೆ..!
ಸುಮಾರು ೮೦ಲಕ್ಷದ ಅಂದಾಜು ವೆಚ್ಚದ ಎಂಟು ಮನೆಗಳ ಕಾಮಗಾರಿ ಮೇ.ತಿಂಗಳಿನಲ್ಲಿ ಪೂರ್ಣಗೊಳಿಸುವ ವಿಶ್ವಾಸದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಇದ್ದು ಇದಕ್ಕಾಗಿ ಈಗಾಗಲೇ ತಯಾರಿ ಕೂಡ ಆರಂಭಿಸಿದೆ ಆ ಎಲ್ಲಾ ಮನೆಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಿ ಸಮುದಾಯಕ್ಕೆ ಹಸ್ತಾಂತರಿಸಿ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಿದೆ.

ಇಲ್ಲಿನ ಈ ಎಲ್ಲಾ ಕೊರಗ ಕುಟುಂಬಗಳಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲು ಪಂಚಾಯತ್ ಪೂರ್ಣಪ್ರಮಾಣದಲ್ಲಿ ಶ್ರಮ ವಹಿಸುತ್ತಿದೆ,ಈಗಾಗಲೇ ಅರ್ಧದಷ್ಟು ಕಾಮಗಾರಿ ನಡೆದಿದ್ದು ಬಾಕಿ ಉಳಿದ ಕಾಮಗಾರಿಗಾಗಿ ಆರ್ಥಿಕ ಕ್ರೂಡೀಕರಣಕ್ಕಾಗಿ ದಾನಿಗಳ ಸಹಕಾರ ಕೋರಿದ್ದೇವೆ.ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಮುದಾಯಕ್ಕೆ ಮನೆ ಹಸ್ತಾಂತರಿಸಲಿದ್ದೇವೆ.
ಸತೀಶ್ ಕುಂದರ್ ಅಧ್ಯಕ್ಷರು ಕೋಟತಟ್ಟು ಗ್ರಾ.ಪಂ.

 

Related Articles

error: Content is protected !!