ಮಣಿಪಾಲ : ಮೂವರ ಮೇಲೆ ಹೆಜ್ಜೇನು ದಾಳಿ ನಡೆಸಿ ಓರ್ವ ಗಂಭೀರಗೊಂಡ ಘಟನೆ ಹೆರ್ಗದ ಶೆಟ್ಟಿಬೆಟ್ಟು ನಲ್ಲಿ ನಡೆದಿದೆ. ಹೆಜ್ಜೇನು ದಾಳಿಯಿಂದ ಗಂಭೀರಗೊಂಡ ವ್ಯಕ್ತಿ ಶೆಟ್ಟಿಬೆಟ್ಟಿನ ಉದಯ ಶೇರಿಗಾರ್ ಎಂದು ಗುರುತಿಸಲಾಗಿದೆ. ಇವರು ಕೆಎಂಸಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಇನ್ನಿಬ್ಬರಾದ ಗ್ಯಾಬ್ರಿಯಲ್ ಮತ್ತು ಮತ್ತು ಸದಾಶಿವ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉದಯ ಶೇರಿಗಾರ್ ಅವರು ಅಯ್ಯಪ್ಪ ಆರಾಧನ ಚಪ್ಪರಕ್ಕೆ ತೆರೆಳುತ್ತಿದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ಉದಯ ಅವರು ತಪ್ಪಿಸಿಕೊಂಡು ಓಡಿ ಹೋಗಿದ್ದು ಗುಡ್ಡದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.