ಕುಂದಾಪುರ : ಉಡುಪಿ ಶ್ರೀ ಕೃಷ್ಣ ಮಠದ ಶಿರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಕುಂದಾಪುರದ ವಿವಿಧ ಭಾಗಗಳಿಂದ ಕ್ರೂಡಿಕರಿಸಿದ ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟೆಹೊಳೆ ಅವರು ಉಪಸ್ಥಿತಿಯಲ್ಲಿ ಕುಂಭಾಶಿ ಆನೆಗುಡ್ಡೆಯ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ರಮಣ ಉಪಾಧ್ಯಾಯ ಅವರು ಕುಂಭಾಶಿ ಆನೆಗುಡ್ಡೆಯ ಸಿದ್ಧಿವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿದರು.
ಉಡುಪಿಯ ಶ್ರೀ ಕೃಷ್ಣ ಮಠದ ಶಿರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಕುಂದಾಪುರದ ವಿವಿಧ ಭಾಗಗಳಿಂದ ಕ್ರೂಡಿಕರಿಸಿದ ಹಸಿರು ಹೊರೆ ಕಾಣಿಕೆ ವಾಹನ ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆ ಭಾಗದಿಂದ ಕುಂಭಾಶಿ ಆನೆಗುಡ್ಡೆಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕೂಡ ಪೂಜೆ ಸಲ್ಲಿಸಿ ಪ್ರಸಾದವನ್ನು ವಿತರಿಸಿದರು, ಶಿರೂರು ಪರ್ಯಾಯ ಮಹೋತ್ಸವಕ್ಕೆ ಬೈಂದೂರು ಶಾಸಕರು ಶುಭವನ್ನ ಹಾರೈಸಿದರು
ಈ ಸಂದರ್ಭದಲ್ಲಿ ಕುಂಭಾಶಿ ಆನೆಗುಡ್ಡೆಯ ದೇವಸ್ಥಾನದ ಮಾಜಿ ಧರ್ಮದರ್ಶಿಗಳಾದ ಸೂರ್ಯನಾರಾಯಣ ಉಪಾಧ್ಯಾಯ, ಹೊರೆ ಕಾಣಿಕೆ ಸಮಿತಿಯ ಸಂಚಾಲಕ ರಾಜೇಶ್ ಕಾವೇರಿ, ಸಹ ಸಂಚಾಲಕ ಶಂಕರ್ ಅಂಕದಕಟ್ಟೆ , ಕುಂದೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ವಾಸುದೇವ ಯಡಿಯಾಳ ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಲಕ್ಷ್ಮೀಶ್ ಹವಾಲ್ದಾರ್ , ಕುಂದಾಪುರ ಖಾರ್ವಿಕೆರಿ ಮಹಾಕಾಳಿ ದೇವಸ್ಥಾನದ ಉಪಾಧ್ಯಕ್ಷ ಪ್ರಕಾಶ್ ಖಾರ್ವಿ ಪರ್ಯಾಯ ಹೊರೆ ಕಾಣಿಕೆ ಸಮಿತಿಯ ಪ್ರಮುಖರಾದ ಯು ಎಸ್.ಶೆಣೈ ಹಾಗೂ ಧಾರ್ಮಿಕ ಕ್ಷೇತ್ರದ ಮುಖಂಡರು, ವಿವಿಧ ರಾಜಕೀಯ ಪಕ್ಷದ ಪ್ರಮುಖರು, ಭಕ್ತ ಸಮುದಾಯದವರು ಇನ್ನಿತರರು ಉಪಸ್ಥಿತರಿದ್ದರು.

