Home » ಸೀರೆಗೆ ಕುಚ್ಛ ಕಟ್ಟುವ ಎಂಬ್ರಾಯ್ಡರಿ ಡಿಸೈನ್ ಕಾರ್ಯಾಗಾರ
 

ಸೀರೆಗೆ ಕುಚ್ಛ ಕಟ್ಟುವ ಎಂಬ್ರಾಯ್ಡರಿ ಡಿಸೈನ್ ಕಾರ್ಯಾಗಾರ

by Kundapur Xpress
Spread the love

ಕುಂದಾಪುರ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಲಲಿತಾ ಕಲಾ ಸಂಘದ ವತಿಯಿಂದ ಸೀರೆಗೆ ಕುಚ್ಛ ಕಟ್ಟುವ ಎಂಬ್ರಾಯ್ಡರಿ ಡಿಸೈನ್ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.
ಇತ್ತೀಚಿನ ಕಾಲಮಾನದಲ್ಲಿ ವಿದ್ಯಾರ್ಥಿಗಳು ಒತ್ತಡ ಪರಿಸ್ಥಿತಿಯನ್ನು ನಿಭಾಯಿಸಲು ಹಾಗೂ ತಾಳ್ಮೆ, ಶ್ರದ್ಧೆಯನ್ನು ಅಳವಡಿಸಿಕೊಳ್ಳಲು ಇಂತಹ ಕೆಲವೊಂದು ಡಿಸೈನಿಂಗ್ ಕಲಿಯುವುದು ಅನಿವಾರ್ಯ ಎಂದು ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರೇವತಿ ಡಿ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಹಾಗೂ ಗುಂಪು ವಿಭಾಗದಲ್ಲಿ ಸೀರೆಗೆ ಕುಚ್ಛ ಕಟ್ಟುವ ವಿನ್ಯಾಸದಲ್ಲಿ ಉತ್ಸುಕತೆಯಿಂದ ಭಾಗವಹಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಲಲಿತಾ ಕಲಾ ಸಂಘದ ಸಂಯೋಜಕರಾದ ಶ್ರೀಮತಿ ದೀಪಿಕಾ ಜಿ., ಶ್ರೀ ರಕ್ಷಿತ್ ರಾವ್, ಶ್ರೀಮತಿ ನಿರ್ಮಲ ಬಿಲ್ಲವ, ಶ್ರೀಮತಿ ಪ್ರೀತಿ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸುಪ್ರಿಯಾ ಸ್ವಾಗತಿಸಿ, ಯಕ್ಷಿತಾ ಅತಿಥಿ ಪರಿಚಯಿಸಿ, ಪಲ್ಲವಿ ವಂದಿಸಿ, ವಾಣಿಶ್ರೀ ಕಾರ್ಯಕ್ರಮ ನಿರ್ವಹಿಸಿದರು.

 

Related Articles

error: Content is protected !!