Home » ಹೃಷಿಕಾ ಆರ್ಟ್ ಎಂಡ್ ಕ್ರಾಫ್ಟ್ ತರಗತಿಯ ಅನಾವರಣ
 

ಹೃಷಿಕಾ ಆರ್ಟ್ ಎಂಡ್ ಕ್ರಾಫ್ಟ್ ತರಗತಿಯ ಅನಾವರಣ

by Kundapur Xpress
Spread the love

ಕೋಟೇಶ್ವರ : ತೆಂಕು ಪೇಟೆಯ ಕೆ.ಎಸ್.ಶೇಟ್ ಬಿಲ್ಡಿಂಗ್ ನಲ್ಲಿ ಹೃಷಿಕಾ ಆರ್ಟ್ ಎಂಡ್ ಕ್ರಾಫ್ಟ್ ತರಗತಿಯನ್ನು ಕೋಟೇಶ್ವರ ಮಾರಿಯಮ್ಮ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀ ಸುಕೇಶ್ ಶೇಟ್ ರವರು ಉದ್ಘಾಟಿಸಿ, ನಮ್ಮ ಕಲೆ ಸಂಸ್ಕೃತಿ ಉಳಿಸಿ ಬೆಳೆಸಿ ಮಕ್ಕಳಲ್ಲಿ ಸೃಜನಶೀಲತೆಯ ಅನಾವರಣದೊಂದಿಗೆ, ಏಕಾಗ್ರತೆಯನ್ನು ಇಮ್ಮಡಿಗೊಳಿಸುವ ಈ ಕಲೆಗೆ ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದುಷಿ ನೂತನ ಎಸ್ ಶೇಟ್, ತರಗತಿಗೆ ಸ್ಥಳಾವಕಾಶ ನೀಡಿದ ಸೀತಾ ಶ್ರೀನಿವಾಸ ಶೇಟ್ ಮತ್ತು ಹೃಷಿಕಾ ಆರ್ಟ್ ಎಂಡ್ ಕ್ರಾಫ್ಟ್ ತರಗತಿಯ ವ್ಯವಸ್ಥಾಪಕರಾದ ಹರ್ಷ ಕೋಟೇಶ್ವರ ಮತ್ತು ತರಗತಿಯ ಮಕ್ಕಳು ಉಪಸ್ಥಿತರಿದ್ದು, ಶ್ರೀಮತಿ ಕಾವ್ಯ ಹರ್ಷ ಕೋಟೇಶ್ವರ ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!