Home » ಜನಪದ ಸಾಹಿತ್ಯದ ಶ್ರೀಮಂತಿಕೆ ಉಳಿಸಿ ಮತ್ತು ತೊಡಗಿಸಿಕೊಳ್ಳಿ
 

ಜನಪದ ಸಾಹಿತ್ಯದ ಶ್ರೀಮಂತಿಕೆ ಉಳಿಸಿ ಮತ್ತು ತೊಡಗಿಸಿಕೊಳ್ಳಿ

- ಡಾ. ಕನರಾಡಿ ವಾದಿರಾಜ ಭಟ್

by Kundapur Xpress
Spread the love

ಮೂಡ್ಲಕಟ್ಟೆ : ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಾಹಿತ್ಯ ಸಂಘದ ಆಶ್ರಯದಲ್ಲಿ ಅಂತರಾಷ್ಟ್ರೀಯ ಜಾನಪದ ದಿನದ ಪ್ರಯುಕ್ತ “ಜನಪದ ಚಾವಣಿ ವಿಚಾರ ಸಂಕೀರ್ಣ” ವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಕನರಾಡಿ ವಾದಿರಾಜ ಭಟ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜನಪದ ಸಾಹಿತ್ಯದ ಇತಿಹಾಸ, ಮಹತ್ವ, ಅದರ ವಿವಿಧ ಪ್ರಕಾರಗಳು ಹಾಗೂ ತಾವು ಸಂಗ್ರಹಿಸಿದ ಜನಪದ ಕಥೆ, ಹಾಡು, ಒಗಟುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಜನಪದ ಸಾಹಿತ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಪರಿ ಮತ್ತು ಉಳಿಸುವ ಮಾರ್ಗವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್, ಜನಪದ ಭಾಷೆಯ ಕಲೆ ಮತ್ತು ಸಂಸ್ಕೃತಿಯನ್ನು ಅನುಸರಿಸುವ ಮೂಲಕ ಉಳಿಸಲು ಸಾಧ್ಯವೆಂದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳ ವರದಿ, ಹಾಗೂ ಸಾಹಿತ್ಯ ಸಂಘದ ಶಿಕ್ಷಕ ಸಂಯೋಜಕರಿಂದ ಸಂಸ್ಥೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಘದ ಸಂಯೋಜಕರು ಮತ್ತು ಕನ್ನಡ ಉಪನ್ಯಾಸಕರಾದ ಶ್ರೀಮತಿ ರೇವತಿ, ಹಾಗೂ ಕು. ರಾಜೇಶ್ವರಿ, ಇಂಗ್ಲಿಷ್ ಉಪನ್ಯಾಸಕಿ, ವಿದ್ಯಾರ್ಥಿ ಸಂಯೋಜಕರಾದ ತೃತೀಯ ಬಿಸಿಎ ವಿದ್ಯಾರ್ಥಿಗಳಾದ ಶ್ರೀ ಅನಸ್, ಕು. ರಿಶಿತಾ ಶೆಟ್ಟಿ, ದ್ವಿತೀಯ ಬಿಸಿಎ ವಿದ್ಯಾರ್ಥಿಗಳಾದ ಕು. ಶ್ರೀ ರಕ್ಷಾ, ಶ್ರೀ ಪ್ರಜ್ವಲ್, ಜನಪದ ಸಾಹಿತಿ ಶ್ರೀಮತಿ ಭಾರತಿ ಮರವಂತೆ, ಉಪನ್ಯಾಸಕ ವೃಂದದವರು ಹಾಗೂ ಸಾಹಿತ್ಯ ಸಂಘದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತೃತೀಯ ಬಿಸಿಎ ವಿದ್ಯಾರ್ಥಿನಿ ಕು. ರಶಿತಾ ನಿರೂಪಿಸಿದರು.

 

Related Articles

error: Content is protected !!