Home » ಸಮಗ್ರ ಹಿಂದು ಸಮಾಜದ ಸಂಘಟನೆ ಸಂಘದ ಗುರಿ
 

ಸಮಗ್ರ ಹಿಂದು ಸಮಾಜದ ಸಂಘಟನೆ ಸಂಘದ ಗುರಿ

ಡಾ. ಮೋಹನ್‌ ಭಾಗ್ವತ್

by Kundapur Xpress
Spread the love

ಹೊಸದಿಲ್ಲಿ : ಸಮಗ್ರ ಹಿಂದು ಸಮಾಜದ ಸಂಘಟನೆ ಮಾಡುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆ‌ರ್.ಎಸ್‌.ಎಸ್) ದ ಗುರಿಯಾಗಿದೆ. ಒಗ್ಗಟ್ಟಿನಿಂದ ಇರಲು ನಮಗೆ ಏಕರೂಪತೆಯ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಪ್ರಯುಕ್ತ 100 ವರ್ಷಗಳ ಸಂಘ ಪಯಣ ಹೊಸ ದಿಗಂತಗಳು ಎಂಬ ಶೀರ್ಷಿಕೆಯಲ್ಲಿ ದಿಲ್ಲಿಯ ವಿಜ್ಞಾನ ಭವನದಲ್ಲಿ ಮೂರು ದಿನ ನಡೆಯುತ್ತಿರುವ ಉಪನ್ಯಾಸ ಸರಣಿಯಲ್ಲಿ ಮೊದಲ ದಿನ ಅವರು ಮಾತನಾಡಿದರು.

ನಾವು ಸಾಮರಸ್ಯದಿಂದ ಒಟ್ಟಿಗೆ ಬದುಕುವ ಸಂಸ್ಕೃತಿಯನ್ನು ಹೊಂದಿದ್ದೇವೆ. ಭಾರತೀಯ, ಹಿಂದು ಎನ್ನುವುದರಲ್ಲಿ ತಪ್ಪಿಲ್ಲ. ಭಾರತದಲ್ಲಿ ಜೀವಿಸುವವರೆಲ್ಲರೂ ಹಿಂದುಗಳೇ ಆಗಿದ್ದಾರೆ. ಸುಮಾರು 40,000 ವರ್ಷಗಳ ಹಿಂದಿನಿಂದಲೂ ಭಾರತದಲ್ಲಿ ವಾಸಿಸುವವರ ಜನರ ಡಿಎನ್‌ಎ ಒಂದೇ ಆಗಿದೆ. ಕೆಲವರು ತಮ್ಮನ್ನು ತಾವು ಹಿಂದುಗಳೆಂದು ತಿಳಿದಿದ್ದಾರೆ, ಕೆಲವರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನು ಕೆಲವರು ಅದನ್ನು ತಿಳಿದಿಲ್ಲ.

ಆದರೆ, ಈ ವಿಷಯಗಳು ನಮ್ಮಲ್ಲಿ ಪ್ರತ್ಯೇಕತೆಯನ್ನು ಸೃಷ್ಠಿಸುವುದಿಲ್ಲ ವೈವಿಧ್ಯತೆಯಲ್ಲಿ ಎಕತೆ ಭಾರತೀಯರ ಸ್ವಭಾವವಾಗಿದೆ ಎಂದರು

 

Related Articles

error: Content is protected !!