ಮೂಡ್ಲಕಟ್ಟೆ : ಮೂಡ್ಲಕಟ್ಟೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ವಾಣಿಜ್ಯ ಸಂಘದಿಂದ ಕಾಲೇಜಿನ ಬಿ. ಕಾಂ ಮತ್ತು ಬಿ.ಬಿ.ಎ ವಿದ್ಯಾರ್ಥಿಗಳಿಗೆ ಕೈಗಾರಿಕಾ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಶ್ರೀ ಕೃಷ್ಣ ಪ್ರಸಾದ್ ಕ್ಯಾಶೂಸ್ ಪ್ರೈವೇಟ್ ಲಿಮಿಟೆಡ್ ವಂಡಾರು ಇಲ್ಲಿಗೆ ನೆಡೆದ ಕೈಗಾರಿಕಾ ಬೇಟಿಯಲ್ಲಿ ಕಂಪನಿಯ ಮ್ಯಾನೇಜರ್ ಶ್ರೀ ಸುಹಾಸ್ ಮತ್ತು ಎಚ್. ಆರ್ ಮ್ಯಾನೇಜರ್ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಕೈಗಾರಿಕಾ ಘಟಕದ ವಿವಿಧ ಉತ್ಪಾದನಾ ಹಂತಗಳಿಂದ ಹಿಡಿದು ಪ್ಯಾಕಿಂಗಿನವರೆಗಿನ ವಿವಿದ ಹಂತವನ್ನು ವಿವರವಾಗಿ ವಿವರಿಸಿದರು. ಕಂಪೆನಿಯ ಮಾಲಿಕರಾದ ಶ್ರೀ ಸಂಪತ್ ಶೆಟ್ಟಿ. ಎಸ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಜೀವನದಲ್ಲಿ ಸೋತಾಗ ಹಿಂತಿರುಗ ಬಾರದು, ಸತತ ಪ್ರಯತ್ನದ ಮೂಲಕ ಯಶಸ್ಸು ಗಳಿಸಬಹುದು ಎನ್ನುವುದನ್ನು ತಮ್ಮ ಉದ್ಯಮದ ಯಶೋಗಾಥೆಯ ಮೂಲಕ ತಿಳಿಸಿದರು.
ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ್ ಕುಮಾರ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅರ್ಚನ ಗದ್ದೆ ಹಾಗೂ ಉಪನ್ಯಾಸಕ ವೃಂದದವರು, ಬಿಕಾಂ ಹಾಗೂ ಬಿಬಿಎ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

