Home » ಐ.ಎಂ.ಜೆ. ಪದವಿ ಕಾಲೇಜು : ಸಿಂಧೂರ ವಿಜಯ ಯಾತ್ರೆ
 

ಐ.ಎಂ.ಜೆ. ಪದವಿ ಕಾಲೇಜು : ಸಿಂಧೂರ ವಿಜಯ ಯಾತ್ರೆ

by Kundapur Xpress
Spread the love

ಮೂಡ್ಲಕಟ್ಟೆ’: ಅಪರೇಷನ್ ಸಿಂಧೂರ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಯಶಸ್ಸನ್ನು ಆಚರಿಸಲು ಮೂಡ್ಲಕಟ್ಟೆ ಐ. ಎಂ. ಜೆ. ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವತಿಯಿಂದ ಸಿಂಧೂರ ವಿಜಯ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ರಾಷ್ಟ್ರದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಿದ ನಮ್ಮ ಸೈನಿಕರ ಶೌರ್ಯ ಮತ್ತು ತ್ಯಾಗಗಳನ್ನು ಗೌರವಿಸುವುದು ಈ ಯಾತ್ರೆಯ ಉದ್ದೇಶವಾಗಿತ್ತು.
ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿದ್ದಾರ್ಥ್ ಜೆ. ಶೆಟ್ಟಿಯವರು ತ್ರಿವರ್ಣ ಧ್ವಜವನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ವಿಜಯ ಯಾತ್ರೆಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರಭಕ್ತಿಯ ಘೋಷಣೆಗಳನ್ನು ಕೂಗುತ್ತಾ, ಸೈನಿಕರಿಗೆ ವಂದನೆಯನ್ನು ಅರ್ಪಿಸಿದರು. ವಿಜಯ ಯಾತ್ರೆಯು ಐ. ಎಂ. ಜೆ .ಸಂಸ್ಥೆಯ ಅವರಣದಿಂದ ಪ್ರಾರಂಭವಾಗಿ, ಮೂಡ್ಲಕಟ್ಟೆಯ ಶ್ರೀ ಐ. ಎಂ ಜಯರಾಮ್ ಶೆಟ್ಟಿ ವೃತ್ತದಲ್ಲಿ ಸಮಾಪ್ತಿಯಾಯಿತು. ಸೈನಿಕರ ಶೌರ್ಯ, ಬಲಿದಾನ, ಮತ್ತು ಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್, ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ್ ಕುಮಾರ್, ಉಪನ್ಯಾಸಕ ವೃಂದದವರು ಹಾಗೂ ಸಂಸ್ಥೆಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಈ ದೇಶ ಪ್ರೇಮದ ನಡಿಗೆಯಲ್ಲಿ ಹೆಮ್ಮೆಯಿಂದ ಹೆಜ್ಜೆ ಹಾಕಿದರು.

 

Related Articles

error: Content is protected !!