Home » ಮೂಡ್ಲಕಟ್ಟೆ ಐಎಂಜೆ ಕಾಲೇಜು : ದೀಕ್ಷಾರಂಭ
 

ಮೂಡ್ಲಕಟ್ಟೆ ಐಎಂಜೆ ಕಾಲೇಜು : ದೀಕ್ಷಾರಂಭ

by Kundapur Xpress
Spread the love

ಕುಂದಾಪುರ : ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಪ್ರಥಮ ವರ್ಷದ ನೂತನ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮವಾದ ದೀಕ್ಷಾರಂಭವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಲಾಯಿತು. ಪ್ರತಿ ವಿದ್ಯಾರ್ಥಿಗಳು ಹಣತೆಯ ಮೂಲಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಚಿಂತನಾ ರಾಜೇಶ್ ರವರು ಮಾತನಾಡುತ್ತಾ, ‘ಜೀವನದ ಹೊಸ ಹಂತದಲ್ಲಿರುವ ನೀವು, ಹೊಸ ವಿಚಾರಗಳನ್ನು ಕಲಿತು ನಿಮ್ಮ ಮುಂದಿನ ಮೂರು ವರ್ಷದ ಪದವಿ ಜೀವನವು ಸುವರ್ಣಾಕ್ಷರದಲ್ಲಿ ಬರೆದಿಡುವಂತಾಗಲಿ. ದಿವಂಗತ ಐ.ಎಂ.ಜಯರಾಮ್ ಶೆಟ್ಟಿ ಅವರ ಸಾಧನೆ,ಆಶಯ, ಹುರುಪು ಸದಾ ನಿಮಗೆ ಪ್ರೇರಣೆಯಾಗಲಿ. ನೀವು ಸರಿಯಾದ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿಕೊಂಡಿದ್ದೀರಿ. ಅದರ ಸದುಪಯೋಗವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿಮ್ಮ ಪ್ರತಿಭೆ ಇಲ್ಲಿ ಮುಕ್ತವಾಗಿ ಅನಾವರಣಗೊಳ್ಳಲಿ’ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್, ‘ದೀಕ್ಷಾರಂಭ ನಿಮ್ಮ ಮುಂದಿನ ಜೀವನದ ಆರಂಭದ ಹೆಜ್ಜೆಯಾಗಿದೆ. ನಿಮ್ಮನ್ನು ನೀವು ಅರಿತು ಕಲಿಕೆಯಲ್ಲಿ ತೊಡಗಿಸಿಕೊಳ್ಳಿ. ಪೋಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೊಳ್ಳಿ. ನೀವು ಹಚ್ಚಿದ ದೀಪ ನಂದಾದೀಪವಾಗಿ ನಿಮ್ಮ ಬಾಳನ್ನು ಸದಾ ಬೆಳಗಲಿ ಎಂದು ಶುಭ ಹಾರೈಸಿದರು. ಕಾಲೇಜಿನ ಉಪಪ್ರಾಂಶುಪಾಲರು ಮತ್ತು ಐ.ಕ್ಯೂ.ಎ.ಸಿ ಸಂಯೋಜಕರಾದ ಶ್ರೀ ಜಯಶೀಲ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಮತ್ತು ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ಮಾಲತಿ ಸಭೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರು,
ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ್ ಕುಮಾರ್ ಸ್ವಾಗತಿಸಿದರು.ಗಣಕಶಾಸ್ತ್ರದ ಮುಖ್ಯಸ್ಥರಾದ ಶ್ರೀಮತಿ ಸ್ವರ್ಣ ರಾಣಿ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅರ್ಚನಾ ಗದ್ದೆ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯಕ್ರಮವನ್ನು ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ದೀಕ್ಷಾ ಹರೀಶ್ ಜೆಪ್ಪು ನಿರೂಪಿಸಿದರು.

 

Related Articles

error: Content is protected !!