Home » ನೀರು ಹಕ್ಕಿಗಳ ಸಂರಕ್ಷಣೆಯ ಕುರಿತು ವಿಶೇಷ ಉಪನ್ಯಾಸ:
 

ನೀರು ಹಕ್ಕಿಗಳ ಸಂರಕ್ಷಣೆಯ ಕುರಿತು ವಿಶೇಷ ಉಪನ್ಯಾಸ:

ಮೂಡ್ಲಕಟ್ಟೆ ಐಎಂಜೆಐಎಸ್ ಸಿಯಲ್ಲಿ

by Kundapur Xpress
Spread the love

ಮೂಡ್ಲಕಟ್ಟೆ : ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಜೌಗು ಪ್ರದೇಶಗಳ ಮತ್ತು ನೀರು ಹಕ್ಕಿಗಳ ಸಂರಕ್ಷಣೆಯ ಕುರಿತು ವಿಶೇಷ ಉಪನ್ಯಾಸವನ್ನು ಹಮ್ಮಿಕೊಂಡಿತ್ತು. ಸಂಪನ್ಮೂಲ ವ್ಯಕ್ತಿಗಳಾದ ಪ್ರಕೃತಿ ಸಂರಕ್ಷಕ ಡಾ. ತೇಜ್ ಮುಂದ್ಕುರ್, ವಿದ್ಯಾರ್ಥಿಗಳಿಗೆ ‘ಜೌಗು ಪ್ರದೇಶದ ಕುರಿತು ವಿವರಿಸುತ್ತಾ, ಅಳಿವಿನ ಅಂಚಿನಲ್ಲಿರುವ ನೀರು ಹಕ್ಕಿಗಳ ಕುರಿತು ಮಾಹಿತಿಯನ್ನು ನೀಡಿ, ಅವುಗಳ ಮೇಲೆ ಪರಿಸರ ಮಾಲಿನ್ಯದ ಪರಿಣಾಮವನ್ನು ತಿಳಿಸಿದರು

ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಮಣಿಪಾಲ್ ನ ಪ್ರೊಫೆಸರ್ ಡಾ. ದೀಪ್ತಾ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಮ್ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಫ್ ಎಸ್ ಎಲ್ ಕುಂದಾಪುರದ ಪ್ರೆಸಿಡೆಂಟ್ ಶ್ರೀ ರಾಕೇಶ್ ಸೋನ್ಸ್, ಎಂಸಿಎನ್ ಪ್ರಾಂಶುಪಾಲರಾದ ಶ್ರೀಮತಿ ಜೆನ್ನಿಫರ್ ಫ್ರೀದಾ ಮೆನಜೆ಼ಸ್ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ್ ಕುಮಾರ್, ಉಪನ್ಯಾಸಕ ವೃಂದ, ರಿಸರ್ಚ್ ಅಸೋಸಿಯೇಟ್ಸ್, ಮಣಿಪಾಲಿನ ಡಿಸೈನ್ ಸ್ಟುಡೆಂಟ್, ಎಫ್ ಎಸ್ ಎಲ್ ಸ್ವಯಂಸೇವಕರು, ಪ್ರಥಮ ಪದವಿ ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಗಣಿತಶಾಸ್ತ್ರ ಉಪನ್ಯಾಸಕಿ ಕು. ರಕ್ಷಿತಾ ಆರ್ ಅಡಿಗ ನಿರೂಪಿಸಿದರು

 

Related Articles

error: Content is protected !!