ಕೋಟ : ಕರಾವಳಿ ಕಡಲ ತಟದಲ್ಲಿ ಇಂಡಿಕಾ ಸಂಸ್ಥೆಯ ಮೂಲಕ ಒಂದಿಷ್ಟು ಸಾಮಾಜಿಕ ಕಾರ್ಯ ನಡೆಯುತ್ತಿದೆ ಅಲ್ಲದೆ ವಾರ್ಷಿಕ ಸಂಭ್ರಮ ಕಾರ್ಯಕ್ರಮ ಅರ್ಥಪೂರ್ಣ ವ್ಯವಸ್ಥೆ ಮುನ್ನುಡಿ ಬರೆದಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ನುಡಿದರು.
ಇಲ್ಲಿನ ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲಾ ವಠಾರದ ಗೀತಾನಂದ ರಂಗಮಂಟಪದಲ್ಲಿ 15ನೇ ವರ್ಷದ ಇಂಡಿಕಾ ಸಂಭ್ರಮ ಕಾರ್ಯಕ್ರಮ , ಇಂಡಿಕಾ ಕಲಾ ಬಳಗ ಪ್ರತಿ ವರ್ಷ ನೀಡುವ ಮೊಳಹಳ್ಳಿ ಹೆರಿಯ ನಾಯ್ಕ ಸ್ಮಾರಕ ಇಂಡಿಕಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜಸ ಓರೆ ಕೋರೆಗಳನ್ನು ತಿದ್ದಲು ಸಂಘಸಂಸ್ಥೆಗಳ ಪಾತ್ರ ಮಹತ್ವವಾದದ್ದು ಈ ದಿಸೆಯಲ್ಲಿ ಇಂಡಿಕಾ ಪುರಸ್ಕಾರ ಕಾರ್ಯಕ್ರಮಗಳ ಮೂಲಕ ತೆರೆಯ ಮರೆಯಲ್ಲಿ ಕಲಾ ಸಾಧನೆ ಗೈದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಹಿರಿಯ ಯಕ್ಷಗಾನ ಕಲಾವಿದ ಗಾವಳಿ ಶೀನ ಕುಲಾಲ್ ಇಂಡಿಕಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ವೇಳೆ ಇತ್ತೀಚಿಗೆ ಹುತಾತ್ಮರಾದ ಅನೂಪ್ ಪೂಜಾರಿ ಬೀಜಾಡಿ ಇವರಿಗೆ ಯೋಧ ನಮನಗೈಯಲಾಯಿತು.
ಪಂಚವರ್ಣ ಸಂಘಟನೆ ಕೋಟ ಇವರಿಗೆ ಇಂಡಿಕಾ ವಿಶೇಷ ಪುರಸ್ಕಾರ
ಶೌರ್ಯ ಪ್ರಶಸ್ತಿ ಪುರಸ್ಕöÈತ ಬಾಲ ಪ್ರತಿಭೆ ಧೀರಜ್ ಐತಾಳ್,ರಾಜ್ಯ ಮಟ್ಟದ ಈಜು ಪಟು ದಿಗಂತ್ ಆರ್ ಪೂಜಾರಿ,ಶೈಕ್ಷಣಿಕ ಸಾಧಕಿ ಸ್ಪಂದನ ಪ್ರತಿಭಾ ಪುರಸ್ಕಾರ, ,ಹಿರಿಯ ಕೃಷಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ ಭಾಸ್ಕರ್ ಶೆಟ್ಟಿ,ಯಶಸ್ವಿ ಕಲಾವೃಂದ ಕೊಮೆ ಇದರ ಸಂಯೋಜಕ ವೆಂಕಟೇಶ ವೈದ್ಯ ತೆಕ್ಕಟ್ಟೆ ಇವರುಗಳಿಗೆ ವಿಶೇಷ ಅಭಿನಂದನೆ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ತಾರಾನಾಥ ಹೊಳ್ಳ,ಸುಜ್ಞಾನ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಶಿಕ್ಷಣ ತಜ್ಞ ಡಾ.ರಮೇಶ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ವಹಿಸಿದ್ದರು. ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್ ಶುಭಾಶಂಸನೆಗೈದರು.
ಯಕ್ಷ ಚಿಂತಕ ಪ್ರೋ.ಎಸ್ ವಿ.ಉದಯ್ ಕುಮಾರ್ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು.
ಮುಖ್ಯ ಅಭ್ಯಾಗತರಾಗಿ ಉದ್ಯಮಿ ಬೀಜು ನಾಯರ್,ಲ.ಸೋ.ಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ,ಸಂಯುಕ್ತ ಪ್ರೌಢಶಾಲೆ ಕೋಟ ಪಡುಕರೆ ಮುಖ್ಯ ಶಿಕ್ಷಕ ವಿವೇಕಾನಂದ ವಿ.ಗಾವ್ಕಂರ್, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಹಿರಿಯ ಕೃಷಿಕ ದಾರೋಜ್ಜಿ ಆನಂದ ಕಾಂಚನ್,ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್,ಸಾಮಾಜಿಕ ಕಾರ್ಯಕರ್ತ ಡಾ.ದಿನೇಶ್ ಗಾಣಿಗ, ಉಪಸ್ಥಿತರಿದ್ದರು.ಇಂಡಿಕಾ ಬಳಗದ ಕಾರ್ಯದರ್ಶಿ ಪ್ರಭಾಕರ್ ಸ್ವಾಗತಿಸಿದರು. ಗೌರವ ಸಲಹೆಗಾರ ಟಿ.ಮಂಜುನಾಥ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯಕ್ರಮವನ್ನುಸಂಚಾಲಕ ಸಂತೋಷ್ ಕುಮಾರ್ ಕೋಟ ನಿರೂಪಿಸಿದರೆ,ಶಿಕ್ಷಕ ಸಂತೋಷ್ ಕಾಂಚನ್ ವಂದಿಸಿದರು.
ಸಾಂಸ್ಕöÈತಿಕ ಕಾರ್ಯಕ್ರಮದ ಭಾಗವಾಗಿ ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ಮಕ್ಕಳ ನೃತ್ಯ ವೈವಿಧ್ಯ, ಅಮ್ಮ ಕಲಾವಿದರು ಮಂಗಳೂರು ಇವರಿಂದ ಅಪ್ಪ ನಾಟಕ ಪ್ರದರ್ಶನಗೊಂಡಿತು