ಕುಂದಾಪುರ: ಬೈಂದೂರು ಸಮೀಪದ ಉಪ್ಪುಂದ ಪೂರ್ಣಿಮಾ ಬಾರ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ನಿರತ 7 ಮಂದಿಯನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ
ಕುಂದಾಪುರ ಸಮೀಪದ ಬಸ್ರೂರಿನ ಹಟ್ಟಿಕುದ್ರುವಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದ 5 ಮಂದಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಅವರಿಂದ ಆಟಕ್ಕೆ ಬಳಸಿದ ಇಸ್ಪೀಟು ಎಲೆ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ ಇಸ್ಪೀಟ್ ಜುಗಾರಿಗೆ ಸಂಬಂಧಿಸಿದಂತೆ ಒಟ್ಟು 12 ಮಂದಿಯನ್ನು ಬಂಧಿಸಲಾಗಿದೆ
ಉಡುಪಿ ಜಿಲ್ಲೆಗೆ ಡಾ.ಅರುಣ್ ರವರು ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡ ನಂತರ ಕುಂದಾಪುರ ಹಾಗೂ ಬೈಂದೂರು ತಾಲೋಕುಗಳಲ್ಲಿ ಇಸ್ಟೀಟು ರಿಕ್ರೀಯೇಶನ್ ಕ್ಲಬ್ ಗಳು ಸಂಪೂರ್ಣವಾಗಿ ಬಂದ್ ಆದ ಹಿನ್ನಲೆಯಲ್ಲಿ ಅಲ್ಲಲ್ಲಿ ಇಸ್ಪೀಟ್ ಆಟಗಳು ನಡೆಯತ್ತಿದೆ ಎಂದು ತಿಳಿದು ಬಂದಿದೆ