ಕಿರಿಮಂಜೇಶ್ವರ : ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ (ಶುಭದಾ ಆಂಗ್ಲ ಮಾಧ್ಯಮ ಶಾಲೆ) ಕಿರಿಮಂಜೇಶ್ವರದಲ್ಲಿ
ಏಪ್ರಿಲ್ 15 ರಿಂದ 19ರ ವರೆಗೆ ಐದು ದಿನಗಳ ಕಾಲ ನಡೆದ ಚಿಣ್ಣರ ಬೇಸಿಗೆ ಶಿಬಿರ ‘ಅಪರಂಜಿ’ ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣೇಶ ಮೊಗವೀರರವರು ಮಾತನಾಡಿ ಬೇಸಿಗೆ ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ಬಾಂಧವ್ಯ ವೃದ್ಧಿಯಾಗುತ್ತದೆ,
ವಿದ್ಯಾರ್ಥಿಗಳೇ ಇಂತಹ ನೂರಾರು ವೇದಿಕೆಗಳು ನಿಮಗೆ ಒದಗಿ ಬರಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ 92.7 ಬಿಗ್ F.M ನ ರೇಡಿಯೋ ಜಾಕಿ ಶ್ರೀಮತಿ ಆರ್.ಜೆ.ನಯನಾರವರು ಮಾತನಾಡುತ್ತಾ ವಿದ್ಯಾರ್ಥಿಗಳೇ ಬೇಸಿಗೆ ರಜೆಯನ್ನು ಹಾಡುತ್ತಾ,ಕುಣಿಯುತ,ನಲಿಯುತ ಖುಷಿ ಖುಷಿಯಾಗಿ ಕಳೆಯಿರಿ ಅಪರಂಜಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮವೆಂದು ಶುಭ ಹಾರೈಸಿದರು.ಅರೆಹೊಳೆ ಪ್ರತಿಷ್ಠಾನ(ರಿ) ಇದರ ಅಧ್ಯಕ್ಷರಾದ ಶ್ರೀ ಸದಾಶಿವ ರಾವ್ ರವರು ಮಾತನಾಡಿ ವಿದ್ಯಾರ್ಥಿ ಪ್ರತಿಭೆಗಳು ಬೆಳಗಲು ನೂರಾರು ವೇದಿಕೆಗಳಿವೆ ಅವೆಲ್ಲವನ್ನೂ ಸರಿಯಾಗಿ ಉಪಯೋಗಿಸಿಕೊಂಡಾಗ ನೀವು ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೊರ ಹೊಮ್ಮಲು ಸಾಧ್ಯವೆಂದರು.
ಶಿಬಿರದ ನಿರ್ದೇಶಕರು,ಶಿಕ್ಷಣ ಸಂಯೋಜಕರಾದ ಶ್ರೀ ಸತ್ಯ ನಾ ಕೊಡೇರಿಯವರು ಮಾತನಾಡುತ್ತಾ ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸುದ್ರಡಗೊಳಿಸಲು ಸಾಧ್ಯವೆಂದರು. ಸಮಾರಂಭದಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಅಂತರಾಷ್ಟ್ರೀಯ ಐಕನ್ ಪ್ರಶಸ್ತಿಗೆ ಆಯ್ಕೆಯಾಗಿರುವ ಧನ್ವಿ ಮರವಂತೆತವರನ್ನು ಅಭಿನಂದಿಸಲಾಯಿತು.
550 ವಿದ್ಯಾರ್ಥಿಗಳು ಶಿಬಿರದ ಸದುಪಯೋಗವನ್ನು ಪಡೆದರು.ಸಮಾರಂಭದಲ್ಲಿ ವಿದ್ಯಾರ್ಥಿಗಳು,ವಿದ್ಯಾಭಿಮಾನಿಗಳು,ವಿದ್ಯಾರ್ಥಿ ಪೋಷಕರು,ಶಾಲಾ ಬೋಧಕ,ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಸ್ವಾಗತಿಸಿ,ಜನತಾ ಕಾಲೇಜಿನ ಉಪನ್ಯಾಸಕ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿ,ಶಿಕ್ಷಕಿ ದಿವ್ಯಾ ಸುವರ್ಣ ವಂದಿಸಿದರು