ಸಾಸ್ತಾನ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಳ್ಕೂದ್ರು ಹಂಗಾರಕಟ್ಟೆಯ ಅಭಿವೃದ್ಧಿ ಸಂಸ್ಥೆ ಇವರ 15ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತವಾಗಿ ಚೇತನಾ ಪ್ರೌಢಶಾಲೆ ಸಭಾಂಗಣ ಮಾಬುಕಳದಲ್ಲಿ ಜರುಗಿತು ಉದ್ಯೋಗ ಕೌಶಲ್ಯಗಳ ಕುರಿತು ಮಾಹಿತಿ ಕಾರ್ಯಗಾರವನ್ನು ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ಮಾತನಾಡಿದರು
ಕಲಿಕಾ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಲ್ಲಿ ವೃತ್ತಿ ಸಿದ್ಧತೆ ಕೌಶಲ್ಯಗಳನ್ನು ಬೆಳೆಸಲು ಮತ್ತು ಉದ್ಯೋಗ ಫಲಿತಾಂಶಗಳನ್ನು ಹೆಚ್ಚಿಸಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂಪರ್ ಗ್ರೇಡ್ ಎಲೆಕ್ಟ್ರಿಕಲ್ ಗುತ್ತಿಗೆದಾರರಾದ ಕೆ.ಆರ್ .ನಾಯಕ್ ವಹಿಸಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಉದಯ್ ಕುಮಾರ್ ಶೆಟ್ಟಿ ಉದ್ಯಮಿಗಳು, ತಾರಾನಾಥ್ ಶೆಟ್ಟಿ ಅಧ್ಯಕ್ಷರು ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಮಾಬುಕಳ, ಮೋಹನ್ ಪ್ರಾಂಶುಪಾಲರು ಆಶ್ರಿತ್ ಸ್ಕೂಲ್& ಕಾಲೇಜ್ ಆಫ್ ನರ್ಸಿಂಗ್ ಕೋಟ, ರವಿಕುಮಾರ್ ಅಧ್ಯಕ್ಷರು ಅಭಿವೃದ್ಧಿ ಸಂಸ್ಥೆ ಹಂಗಾರಕಟ್ಟೆ,, ರಮೇಶ್ ವಕ್ವಾಡಿ ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ ಹಂಗಾರಕಟ್ಟೆ, ಸಂಪನ್ಮೂಲ ವ್ಯಕ್ತಿಗಳಾಗಿ ಚಿರಂಜನ್ ಕೆ ಶೇರಿಗಾರ್ ಉಪನ್ಯಾಸಕರು ಬ್ರಹ್ಮಾವರ, ಕಲಾ ಕುಸುಮ ಪ್ರಶಸ್ತಿ ಪ್ರಧಾನ ಅಬ್ದುಲ್ ರವೂಪ್ ಮುಖ್ಯ ಶಿಕ್ಷಕರು ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರು.
ಹಾಗೂ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷರು ಸರ್ವ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

