Home » ಅಂತರಾಷ್ಟ್ರೀಯ ಯೋಗ ದಿನಾಚರಣೆ
 

ಅಂತರಾಷ್ಟ್ರೀಯ ಯೋಗ ದಿನಾಚರಣೆ

by Kundapur Xpress
Spread the love

ಕೋಟೇಶ್ವರ :  ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಹಾಗೂ Rovers ಮತ್ತು Rangers ಘಟಕದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಗ ಶಿಕ್ಷಕ ಶ್ರೀ ನಾರಾಯಣ ಇವರು ವಿಶ್ವಕ್ಕೆ ಭಾರತದ ವಿಶಿಷ್ಟ ಕೊಡುಗೆಯಾದ ಯೋಗ ಇಂದು ಶಾಂತಿ ಹಾಗೂ ಆರೋಗ್ಯ ಪೂರ್ಣ ಬದುಕಿಗೆ ಅನಿವಾರ್ಯ ಎಂದರು. ಯೋಗವು ಕೇವಲ ಪ್ರದರ್ಶನದ ಸಂಗತಿ ಆಗದೆ ನಿತ್ಯ ಅನುಷ್ಠಾನದ ಅಭ್ಯಾಸ ಆದಾಗ ಮಾತ್ರ ಪ್ರಯೋಜನ ಸಿದ್ಧಿ ಸಾಧ್ಯ ಎಂದರು.

ಆರೋಗ್ಯ ಕಾಳಜಿ ಇರುವವರು ಗಮನಿಸಬೇಕಾದ ಎರಡು ಮುಖ್ಯ ವಿಷಯಗಳು ಎಂದರೆ ಉಸಿರಾಟ ಮತ್ತು ನಾವು ತಿನ್ನುವ ಆಹಾರ. ಇವುಗಳ ಸಮರ್ಪಕ ನಿರ್ವಹಣೆಗೆ ನಮ್ಮ ಪರಂಪರೆ ನೀಡಿದ ಮಾರ್ಗದರ್ಶಿ ಸೂತ್ರವೇ ಯೋಗ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮರಾಯ ಆಚಾರ್ಯ ವಹಿಸಿದ್ದರು. ನಂತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಾಮೂಹಿಕವಾಗಿ ಯೋಗ ಪ್ರದರ್ಶನ ಮಾಡಿದರು. ಶ್ರೀ ನಾರಾಯಣ ಇವರು ವಿವಿಧ ಆಸನಗಳ ಮಹತ್ವದ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.ಎನ್ ಎಸ್ ಎಸ್ ಸಂಯೋಜನಾಧಿಕಾರಿ ಶ್ರೀ ನಿರಂಜನ ಶರ್ಮಾ ಪ್ರಾರ್ಥಿಸಿದರು. ಸ್ವಯಂ ಸೇವಕರಾದ ವೈಷ್ಣವಿ ಮತ್ತು ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ರಶ್ಮಿ ಸ್ವಾಗತಿಸಿದರು. Rovers Rangers ಘಟಕದ ಸಂಚಾಲಕರಾದ ಶ್ರೀ ಕಾರ್ತಿಕ್ ಪೈ ಉಪಸ್ಥಿತರಿದ್ದರು.

 

Related Articles

error: Content is protected !!