Home » ಜನಾಕರ್ಷಣೆಗೊಂಡ ಕನ್ನಡ ರಥೋತ್ಸವದ ಪುರಮೆರವಣಿಗೆ
 

ಜನಾಕರ್ಷಣೆಗೊಂಡ ಕನ್ನಡ ರಥೋತ್ಸವದ ಪುರಮೆರವಣಿಗೆ

by Kundapur Xpress
Spread the love

ಕುಂದಾಪುರ : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರ ಹಾಗೂ ವಿವಿಧ ಸಂಸ್ಥೆಗಳ ವತಿಯಿಂದ ನಡೆದ ಕನ್ನಡ ರಥೋತ್ಸವದ ಪುರಮೆರವಣಿಗೆಯು ಜನಾಕರ್ಷಣೆಗೊಂಡಿತು

ಸಂಸದ ಕೋಟ ಶ್ರೀನಿವಾಸ ಪೂಜಾರಿ ಕನ್ನಡ ರಥೋತ್ಸವ ಉದ್ಘಾಟಿಸಿ ಶುಭ ಹಾರೈಸಿದರು. ಬಸ್ರೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಳದ ಆಡಳಿತ ಮೊತ್ತೇಸರರಾದ ಬಿ.ಅಪ್ಪಣ್ಣ ಹೆಗ್ಡೆ ಶುಭಾಶಂಸನೆಗೈದರು. ಕುಂದಾಪುರ ವಲಯ ಧರ್ಮಗುರು ರೆ.ಪಾವ್ ರೇಗೋ ಮತ್ತು ಹಿರಿಯ ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ಪುರಮೆರವಣಿಗೆಗೆ ಚಾಲನೆ ನೀಡಿದರುಶಾಸಕರಾದ ವಿ.ಸುನಿಲ್‌ ಕುಮಾರ್, ಕಿರಣ್ ಕುಮಾರ ಕೊಡ್ಗಿ ಗುರುರಾಜ ಶೆಟ್ಟಿ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಧನಂಜಯ್ ಸರ್ಜಿ, ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಉಪಸ್ಥಿತರಿದ್ದರು

ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಉಪಾಧ್ಯಕ್ಷೆ ವನಿತಾ ಬಿಲ್ಲವ, ಜೂನಿಯರ್ ಕಾಲೇಜು ಪ್ರಿನ್ಸಿಪಾಲ್ ರಾಮಕೃಷ್ಣ ಬಿ.ಜಿ., ವೈಸ್‌ ಪ್ರಿನ್ಸಿಪಾಲ್ ಕಿರಣ್ ಹೆಗ್ಡೆ, ಭಂಡಾರ್ ಕಾರ್ಸ್ ಕಾಲೇಜು ಪ್ರಿನ್ಸಿಪಾಲ್· ಡಾ.ಶುಭಕರ ಆಚಾರಿ, ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಡಾ.ಜಿ.ಎಂ.ಗೊಂಡ, ಮೊಳಹಳ್ಳಿ ಉದ್ಯಮಿ ಎಂ.ದಿನೇಶ್ ಹೆಗ್ಡೆ, ಪುರಸಭೆ ಮುಖ್ಯಾಧಿಕಾರಿ ಆನಂದ, ಉಡುಪಿ ಉದ್ಯಮಿಗಳಾದ ಉದಯಕುಮಾರ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಹಂಗಳೂರು ಲಯನ್ಸ್ ಕ್ಲಬ್‌ ಅಧ್ಯಕ್ಷ ರೋಹನ್ ಡಿಕೋಸ್ಟ ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ, ಕಲಾಕ್ಷೇತ್ರ ಸಂಸ್ಥೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ ಮತ್ತು ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು

ಗೀತಗಾಯನ ತಂಡ ನಾಡಗೀತೆ ಹಾಡಿದರು. ಕಲಾಕ್ಷೇತ್ರ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಸಾಪ ತಾಲೂಕು ಕಾರ್ಯದರ್ಶಿ ದಿನಕರ ಆರ್.ಶೆಟ್ಟಿ ಮತ್ತು ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು

ಕುಂದಾಪುರ ನಗರದ ಪ್ರಮುಖ ಬೀದಿಯಲ್ಲಿ ಕನ್ನಡ ರಥೋತ್ಸವದ ಪುರಮೆರವಣಿಗೆ ನಡೆಯಿತು. ತಾಯಿ ಭುವನೇಶ್ವರಿಯ ವಿಗ್ರಹವನ್ನು ರಥದಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು,

ಕಲಾತಂಡಗಳು, ಭಜನೆ ತಂಡಗಳು, ದಫ್, ಭತ್ತಕುಟ್ಟುವ ಹಾಡಿನ ಟ್ಯಾಗ್ಲೋ ಚೆಂಡೆ ಮೇಳ, ವಾದ್ಯ, ಎನ್‌ಸಿಸಿ, ಎನ್ನೆಸ್ಸೆಸ್, ಸೈಟ್ಸ್ ಗೈಡ್ಸ್, ರೇಂಜರ್ಸ್ ರೋವರ್ಸ್, ಸಸಹಾಯ ಸಂಘಗಳು, ಡೋಲು, ಡೊಳ್ಳು ಕುಣಿತ, ಎತ್ತಿನಗಾಡಿ ಹೀಗೆ ಮೆರವಣಿಗೆಯು ಜನಾಕರ್ಷಣೆಗೊಂಡಿತು

ಜನಾಕರ್ಷಣೆಗೊಂಡ ಭತ್ತ ಕುಟ್ಟುವ ಟ್ಯಾಗ್ಲೋ

ಕುಂದಾಪುರ ನಗರದ ಪ್ರಮುಖ ಬೀದಿಯಲ್ಲಿ ನಡೆದ  ಕನ್ನಡ ರಥೋತ್ಸವದ ಪುರಮೆರವಣಿಗೆಯಲ್ಲಿ ಭತ್ತ ಕುಟ್ಟುವ ಟ್ಯಾಗ್ಲೋ ಜನಮನ ಸೂರೆಗೊಂಡಿತು ಭತ್ತದ ಕಟಾವು ಮಾಡುವ ಈ ಸಂದರ್ಭದಲ್ಲಿ ಅಡಿಮಂಚದ ಮೇಲೆ ಭತ್ತ ಜಪ್ಪುವುದು ಮಹಿಳೆಯರು ಓನಕೆಯಿಂದ ಭತ್ತ ತುಳಿಯುವುದು ಕಡುಕಲ್ಲಿನಿಂದ ಅರೆಯುವದು ಜನ ಮೆಚ್ಚುಗೆಗೆ ಒಳಗಾಯಿತು

ಕುಂದಾಪುರ ನಗರವನ್ನು ಕನ್ನಡ ಧ್ವಜ ಮತ್ತು ಪತಾಕೆಗಳಿಂದ ಅಲಂಕಾರ ಮಾಡಲಾಗಿದ್ದು ಸಾವಿರಾರು ಜನ ಮೆರವಣಿಗೆಯಲ್ಲಿ ಭಾಗವಹಿಸಿದರು

   

Related Articles

error: Content is protected !!