ಕುಂದಾಪುರ : ಶ್ರೀ ಕಾಳಿಕಾಂಬಾ ಎಜುಕೇಷನಲ್ ಟ್ರಸ್ಟಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾ ವೇದಿಕೆಯಲ್ಲಿ ಜರುಗಿತು, ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರಾದ ತ್ರಾಸಿ ಸುಧಾಕರ ಆಚಾರ್ಯರು ವಹಿಸಿ ಮುಂದಿನ ದಿನಗಳಲ್ಲಿ ಒಂದು ಕೋಟಿಗೂ ಹೆಚ್ಚು ಮೂಲಧನವನ್ನು ಸಂಗ್ರಹಿಸಿ ಅದರಿಂದ ಬರುವ ಬಡ್ಡಿ ಹಣವನ್ನು ವಿದ್ಯಾರ್ಥಿಗಳಿಗೆ ಕೊಡುವ ಆಶಯ ವ್ಯಕ್ತಪಡಿಸಿದರು
ಕಾರ್ಯಕ್ರಮದ ಉದ್ಘಾಟನೆಯನ್ನು ಆಡಳಿತ ಮೋಕ್ತೆಸರರಾದ ಕಳಿ ಚಂದ್ರಯ್ಯ ಆಚಾರ್ಯ ನೆರವೇರಿಸಿ ಶುಭಾಶಂಸನೆಯನ್ನುಗೈದರು. ಟ್ರಸ್ಟಿನ ಗೌರವ ಅಧ್ಯಕ್ಷರಾದ ಚಂದ್ರಯ್ಯ ಆಚಾರ್ಯ ನಾಡ ಗುಡ್ಡೆಯಂಗಡಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಯಶೋಧರ ಆಚಾರ್ಯ ಟ್ರಸ್ಟಿನ ವಾರ್ಷಿಕ ವರದಿ ಮಂಡಿಸಿದರು, ಕೋಶಾಧಿಕಾರಿ ಮಹೇಶ್ ಆಚಾರ್ಯ ಉಪ್ಪುಂದ ಲೆಕ್ಕಪತ್ರ ವಾಚಿಸಿದರು.
ತದನಂತರ 77 ವಿದ್ಯಾರ್ಥಿಗಳಿಗೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೇತನ ವಿತರಿಸಿ, ಶೇಖಡಾ 95% ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಾ| C A ನಾಗರಾಜ ಆಚಾರ್ಯ ಬೆಂಗಳೂರು, ವಸಂತ ಆಚಾರ್ಯ ಪ್ರಾಂಶುಪಾಲರು ಕಾರ್ಕಳ, ಎಚ್ ಉದಯ ಆಚಾರ್ಯ ಹುಚ್ಕೆರೆ ಶುಭ ಹಾರೈಸಿದರು.
ಸಭೆಯಲ್ಲಿ ಟ್ರಸ್ಟಿನ ಉಪಾಧ್ಯಕ್ಷರಾದ ರವೀಂದ್ರ ಆಚಾರ್ಯ,ಟ್ರಸ್ಟಿಗಳಾದ ಸಿ ನಾರಾಯಣ ಆಚಾರ್ಯ, ಕೃಷ್ಣಯ್ಯ ಆಚಾರ್ಯ ಮರವಂತೆ,ಗುರುರಾಜ ಆಚಾರ್ಯ ಹಟ್ಟಿಯಂಗಡಿ, ಹಾಗೂ ದೇವಸ್ಥಾನದ ಎರಡನೇ ಮೋಕ್ತೇಸರರಾದ ಉದಯ ಆಚಾರ್ಯ ಕಟ್ಟಬೇಲ್ತುರು, ಮೂರನೇ ಮೋಕ್ತೇಸರರಾದ ಶ್ರೀಧರ ಆಚಾರ್ಯ ಮರವಂತೆ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕೊಡ್ಲಾಡಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಅಶೋಕ ಆಚಾರ್ಯ ನಾವುಂದ, ಸೇವಾಸಮಿತಿ ಅಧ್ಯಕ್ಷರಾದ ದಿನೇಶ್ ಆಚಾರ್ಯ ಮರವಂತೆ ಮತ್ತು ಮಹಿಳಾ ಸಮಿತಿ ಅಧ್ಯಕ್ಷರಾದ ಶೈಲಾ ರಾಮಕೃಷ್ಣ ಆಚಾರ್ಯ ಉಪ್ಪುಂದ ಉಪಸ್ಥಿತರಿದ್ದರು.
ಟ್ರಸ್ಟಿ ವಿಜೇಂದ್ರ ಆಚಾರ್ಯ ಕಟ್ಟಿನಮಕ್ಕಿ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟಿ ಪ್ರಕಾಶ ಆಚಾರ್ಯ ವಂದಿಸಿದರು.

