ಕಾರ್ಕಳ : ಅತ್ಯಾಚಾರಕ್ಕೊಳಗಾದ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಖಚಿತಪಡಿಸಿದ್ದಾರೆ.
ಯುವತಿಗೂ ಆರೋಪಿಗೂ ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಇತ್ತು. ಆಕೆಯ ತಂದೆಯ ಜೊತೆ ಆರೋಪಿಗೆ ಹಲವು ವರ್ಷಗಳ ಪರಿಚಯ ಇತ್ತು ಆ ಕಾರಣಕ್ಕೆ ಆಕೆ ಆತನ ಜೊತೆ ಕಾರಿನಲ್ಲಿ ಹೋಗಿದ್ದಳು ಅಲ್ಲಿ ಆಕೆಗೆ ಬಿಯರ್ ಕುಡಿಸಿದ್ದಾರೆ. ಅದರಲ್ಲಿ ಡ್ರಗ್ಸ್ ಮಿಕ್ಸ್ ಮಾಡಲಾಗಿತ್ತು. ಅದನ್ನು ಕುಡಿದ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾಳೆ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದವರು ಹೇಳಿದ್ದಾರೆ.
ಆಕೆಯ ರಕ್ತಪರೀಕ್ಷೆ ವರದಿ ಇನ್ನು ಬಂದಿಲ್ಲ. ರಕ್ತ ಪರೀಕ್ಷೆ ವರದಿಯಲ್ಲಿ ಯಾವ ರೀತಿಯ ಡ್ರಗ್ಸ್ ಎನ್ನುವುದು ತಿಳಿಯುತ್ತದೆ. ಅದನ್ನು ಎಲ್ಲಿಂದ ತಂದರು ಎಂದು ತನಿಖೆ ಮಾಡುತ್ತಿದ್ದೇವೆ. ಆರೋಪಿ ಅಲ್ತಾಫ್, ಡ್ರಗ್ ಪೆಡ್ಲರ್ ಎನ್ನುವ ಬಗ್ಗೆ ಮಾಹಿತಿ ಇಲ್ಲ ಅದನ್ನು ತಳ್ಳಿ ಹಾಕುವಂತಿಲ್ಲ ಎಂದು ಐಜಿಪಿ ಹೇಳಿದ್ದಾರೆ.
ಆಕೆಯ ದೂರಿನಂತೆ ಎಫ್‌ಐಆರ್ ಮಾಡಲಾಗಿದ್ದು, ಗ್ಯಾಂಗ್ ರೇಪ್ ಎಂದನಿಸುತ್ತಿಲ್ಲ. ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಬೇಕಾಗಿದೆ. ಈಗ ಆಕೆ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ, ಆಕೆಯ ಪರಿಸ್ಥಿತಿ ಸುಧಾರಿಸಿದ ಮೇಲೆ ಪೂರ್ಣ ವಿವರ ತಿಳಿಯಬಹುದು ಎಂದು ಹೇಳಿದ್ದಾರೆ. ‘