ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡಬೆಟ್ಟು ಬೀಡಿನಕೆರೆ ವಾರ್ಡಿನ ಹರೀಶ್ಚಂದ್ರ ರಾವ್ ಮನೆಗೆ ಹೋಗುವ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಹಾಗೂ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಸ್ ಬಲ್ಲಾಳ್, ಅಶೋಕ್ ರಾವ್, ಸವಿತಾ ಶೆಟ್ಟಿ, ಸುಜಲ ಪೂಜಾರಿ, ಪವಿತ್ರ ಶೆಟ್ಟಿ, ಕವಿತಾ ಸುವರ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ಶಕ್ತಿ ಕೇಂದ್ರ ಪ್ರಮುಖ್ ನಿತಿನ್ ವಿ ಶೇರಿಗಾರ್, ಬೂತ್ ಅಧ್ಯಕ್ಷರಾದ ಕರುಣಾಕರ ಪೂಜಾರಿ, ಸ್ಥಳೀಯರಾದ ಆಶ್ವಿನ್ ಬಲ್ಲಾಳ್, ರಾಜೇಶ್ ಶೆಟ್ಟಿ, ಅಶೋಕ್ ಶೆಟ್ಟಿ, ಮಹೇಶ್ ರಾವ್, ವಸಂತ ರಾವ್,ಭಾಸ್ಕರ್ ಕೋಟ್ಯಾನ್, ಸಂತೋಷ ದೇವಾಡಿಗ, ಅಶ್ವಿನಿ, ವಿದ್ಯಾ, ವಿನೋದ, ಸುಧೀರ್ ಶೆಟ್ಟಿ, ಗಣೇಶ್ ಶೆಟ್ಟಿ, ಕೃಷ್ಣ ಪೂಜಾರಿ, ಶಶಿಧರ್ ಮೊದಲಾದವರು ಉಪಸ್ಥಿತರಿದ್ದರು.