Home » ಕೋಡಿಯಲ್ಲಿ ಚಕ್ರಮ್ಮ ಸಭಾಭವನ ಉದ್ಘಾಟನೆ
 

ಕೋಡಿಯಲ್ಲಿ ಚಕ್ರಮ್ಮ ಸಭಾಭವನ ಉದ್ಘಾಟನೆ

ಶಾಲೆ ದೇಗುಲಗಳು ಆತ್ಮಶಕ್ತಿ ತುಂಬುವ ಕೇಂದ್ರ : ಕೇಮಾರು ಶ್ರೀ

by Kundapur Xpress
Spread the love

ಕುಂದಾಪುರ : ಶಾಲೆಗಳಲ್ಲಿ ಜೀವನ ಶಿಕ್ಷಣ ದೊರೆಯಬೇಕು. ಕುಟುಂಬ, ಶಾಲೆ, ದೇವಾಲಯಗಳಲ್ಲಿ ಮನುಷ್ಯತ್ವ ಸೃಷ್ಟಿಸುವ, ಆತ್ಮಶಕ್ತಿ ತುಂಬುವ ಕೆಲಸವಾದರೆ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು

ಅವರು ಬುಧವಾರ ಶ್ರೀ ಚಕ್ರಮ್ಮ ದೇವಸ್ಥಾನ ಕೋಡಿ, ಶ್ರೀ ಚಕ್ರಮ್ಮ ಸಭಾಭವನ ಸಮಿತಿ ಕೋಡಿ ಇವರ ಸಹಯೋಗದಲ್ಲಿ ಶ್ರೀ ಕ್ಷೇತ್ರದ ಭಕ್ತರ ‘ಅನುಕೂಲಕ್ಕಾಗಿ ನಿರ್ಮಿಸಲ್ಪಟ್ಟ ಶ್ರೀ ಚಕ್ರಮ್ಮ ಸಭಾಭವನ ಉದ್ಘಾಟನೆ ಸಂದರ್ಭ ಆಶೀರ್ವಚನ ನೀಡಿದರು.

ಎಲ್ಲರಲ್ಲೂ ಚೈತನ್ಯ ಶಕ್ತಿ ಇದೆ. ಅದನ್ನು ಗುರುತಿಸುವ ಪ್ರಕ್ರಿಯೆ ಆಗಬೇಕು. ಸಮಸ್ಯೆ ಬಂದರೆ ಮಾತ್ರ ದೇವಸ್ಥಾನಕ್ಕೆ ಹೋಗುವುದು ಎನ್ನಲು ಕಾರಣ ಹಿಂದೂ ಸಮಾಜದಲ್ಲಿ ಇರುವ ಧಾರ್ಮಿಕ ಶಿಕ್ಷಣದ ಕೊರತೆ, ದೇವರನ್ನು ನೋಡುವುದು ಮಾತ್ರ ಅಲ್ಲ ದೇವರನ್ನು ತಿಳಿದುಕೊಳ್ಳಬೇಕು. ಅಂತರಂಗದ ದರ್ಶನ ಮಾಡಬೇಕು ಎಂಬ ಧಾರ್ಮಿಕ ಅರಿವಿನ ಅಗತ್ಯವಿದೆ ಎಂದರು

ಸುಸಜ್ಜಿತ ಸಭಾಭವನವನ್ನು ಮುಂಬಯಿ ಉದ್ಯಮಿ ಎನ್.ಟಿ. ಪೂಜಾರಿ, ಭೋಜನಶಾಲೆಯನ್ನು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಪಾಕಶಾಲೆಯನ್ನು ಪ್ರಸಾದ್ ಪ್ರಭು, ಕಚೇರಿಯನ್ನು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಿದರು

ಶ್ರೀ ಚಕ್ರಮ ಸಭಾಭವನ ಸಮಿತಿ ಅಧ್ಯಕ್ಷ ಶಂಕರ ಪಿ. ಪೂಜಾರಿ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ. ಕಿರಣ್ ಕುಮಾರ್ ಕೊಡ್ಡಿ, ಶ್ರೀ ಚಕ್ರಮ್ಮ ದೇವಸ್ಥಾನ ಕೋಡಿಯ ಪಾತ್ರಿಗಳಾದ ರಾಘವೇಂದ್ರ ಪೂಜಾರಿ, ಪುರಸಭೆ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಬಿಲ್ಲವ ಸಮಾಜ ಸೇವಾಸಂಘ ಕುಂದಾಪುರ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಉದ್ಯಮಿ ದಿನೇಶ್ ಕುಂದಾಪುರ, ಕರ್ಣಾಟಕ ಬ್ಯಾಂಕ್ ಉಡುಪಿ ಸಹಾಯಕ ಮಹಾ ಪ್ರಬಂಧಕ ವಾದಿರಾಜ್ ಭಟ್, ಬ್ಯಾರೀಸ್ ಗ್ರೂಪ್ ಆಫ್ ಇನ್‌ ಸ್ಟಿಟ್ಯೂಟ್ ಕೋಡಿಯ ಟ್ರಸ್ಟಿ ಸಿದ್ದಿಕ್ ಬ್ಯಾರಿ, ಎಂಜಿನಿಯರ್ ಸತೀಶ ಪೂಜಾರಿ, ರಮೇಶ್ ಪೂಜಾರಿ ಮಣಿಗೇರಮನೆ, ದಿನಕರ ನಾಯಕ್, ಯಶೋದಾ ಎನ್.ಟಿ. ಪೂಜಾರಿ ಉಪಸ್ಥಿತರಿದ್ದರು. ಚಕ್ರಮ್ಮ ಸಭಾಭವನ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೇಶ ಪೂಜಾರಿ ಸ್ವಾಗತಿಸಿ, ಶ್ರೀ ಚಕ್ರಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೋಡಿ ಗೋಪಾಲ ಪೂಜಾರಿ ಪ್ರಸ್ತಾವಿಸಿ, ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರ್ವಹಿಸಿದರು.

 

Related Articles

error: Content is protected !!