ಕೋಟ : ಕೋಡಿ ಗ್ರಾಮಪಂಚಾಯತ್ ಗ್ರಾಮ ಸಭೆ ಸೋಮವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ ಇದರಿಂದ ಶಾಲಾ ಮಕ್ಕಳು ಸೇರಿದಂತೆ ಹಿರಿಯರಿಗೆ ಭಯದ ವಾತಾವರಣ ಸೃಷ್ಠಿಯಾಗಿದೆ ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಸ್ಥಳೀಯಾಡಳಿತದ ಜನಪ್ರತಿನಿಧಿ ಒಕ್ಕೊರಲವಾಗಿ ಆಗ್ರಹಿಸಿದರು.
ಈ ಬಗ್ಗೆ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಬೀದಿ ನಾಯಿಗಳ ಬಗ್ಗೆ ಸಂತಾನ ಹರಣ ಕ್ರಮಗಳ ಹೊರತಾಗಿ ಸ್ಥಳೀಯಾಡಳಿತವಾಗಿ ಬೇರೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ ಈ ಕುರಿತು ಜಿಲ್ಲಾಡಳಿತಕ್ಕೆ ಲಿಖಿತ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಲ ಸಭೆಗೆ ತಿಳಿಸಿದರು.
ಕೋಡಿ ಕನ್ಯಾಣದ ಅಂಗನವಾಡಿ ಕಟ್ಟಡ ನವೀಕರಿಸಬೇಕಾದರೆ ಸ್ವಂತ ಸ್ಥಳದ ಮಾನ್ಯತೆ ನೀಡಿ ಕನಿಷ್ಟ ಪಕ್ಷ ಮೂರು ಸೆಂಟ್ಸ್ ಸ್ಥಳವಾಗಿ ಮಾರ್ಪಾಡುಗೊಳಿಸಿ ಎಂದು ಅಂಗನವಾಡಿ ಕಾರ್ಯಕರ್ತೆ ಗ್ರಾಮಲೆಕ್ಕಿಗರಲ್ಲಿ ಮನವಿ ಮಾಡಿದರು ಈ ಬಗ್ಗೆ ಪಂಚಾಯತ್ ಸದಸ್ಯರಾದ ಪ್ರಭಾಕರ್ ಮೆಂಡನ್ ಹಾಗೂ ಕೃಷ್ಣ ಪೂಜಾರಿ ಧ್ವನಿಗೂಡಿಸಿದರು.ಇದಕ್ಕೆ ಉತ್ತರಿಸಿದ ಗ್ರಾಮಲೆಕ್ಕಿಗ ಗಿರೀಶ್ ಗ್ರಾಮಲೆಕ್ಕಾಧಿಕಾರಿಗಳ ಕಛೇರಿಗೆ ಕಾಯ್ದಿರಿಸಿದ ಜಾಗ ಆಗಿದೆ ಎಂದಾಗ ಸಭೆಯಲ್ಲಿದ್ದ ಜನಪ್ರತಿನಿಧಿಗಳ ಒತ್ತಾಯಕ್ಕೆ ಈ ಬಗ್ಗೆ ಪರಿಶೀಲಿಸಿ ಮೂರು ಸೆಂಟ್ಸ್ ಸ್ಥಳ ನಿಗದಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ವೇಳೆ ಕೋಡಿ ಭಾಗದ ಬಾಕಿ ಇರುವ ಹಕ್ಕುಪತ್ರಗಳ ಕುರಿತು ಗಿರೀಶ್ ಸಭೆಯಲ್ಲಿ ಮಾಹಿತಿ ನೀಡಿದರು. ಕೋಡಿ ಗ್ರಾ.ಪಂ ವ್ಯಾಪ್ತಿಯ ಹೊಸಬೇಂಗ್ರೆ ಹಾಗೂ ಕೋಡಿ ತಲೆ ಅಂಗನವಾಡಿ ಸಹಾಯಕಿಯರಿಲದೆ ಅಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆ ಎದುರಿಸುತ್ತಿದ್ದಾರೆ ಈ ಬಗ್ಗೆ ಶೀಘ್ರದಲ್ಲೇ ಸಹಾಯಕಿಯರ ನೇಮಕಗೊಳಿಸಲು ಗ್ರಾಮಸಭೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಆಗ್ರಹಿಸಿತು.
ಗ್ರಾಮಪಂಚಾಯತ್ ವ್ಯಾಪ್ತಿಯ ಇತ್ತೀಚಿಗೆ ಹೊಳೆ ಹೂಳೆತ್ತಿದ ಮರಳನ್ನು ತೆರವು ಮಾಡದಂತೆ ಸಿಆರ್ ಝಡ್ ಇಲಾಖೆಗೆ ಗ್ರಾಮಸಭೆ ಆಗ್ರಹಿಸಿತು.
ಈ ಬಗ್ಗೆ ಉತ್ತರಿಸಿದ ಇಲಾಖೆಯ ಧೀರಜ್ ಹಸಿರುಪೀಠ ತೀರ್ಪು ಪ್ರಕಟಿಸಿದ ಈ ಹೊಳೆ ಹೂಳು ತೆಗೆದ ಪ್ರಕರಣ ಈಗಾಗಲೇ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮಗಳ ಬಗ್ಗೆ ಪರಿಶೀಲಿಸಿದ್ದಾರೆ ಇದರಲ್ಲಿ ತಮ್ಮ ಇಲಾಖೆ ಏನು ಮಾಡಲು ಸಾಧ್ಯವಿಲ ಎಂದಾಗ ಸಭೆಯಲ್ಲಿದ್ದ ಸದಸ್ಯ ಅಂತೋನಿ ನಾಯ್ಕ್ ಆ ಸ್ಥಳದಲ್ಲಿ ಬಂದರು ಪ್ರದೇಶಕ್ಕೆ ಕಾಯ್ದಿರಿಸಿದ ಸ್ಥಳವಾಗಿದ್ದು ಅದು ಹೊಳೆಯಲ್ಲ ಅಲ್ಲಿ ಮರಳು ದಿಬ್ಬ ಮೊದಲಿನಿಂದಲೂ ಇದ್ದು ಹೊಳೆ ಭಾಗದಲ್ಲಿ ಬಂದರು ಪ್ರದೇಶವಾಗಿ ಮಲ್ಪೆ,ಗಂಗೊಳ್ಳಿ ಮಾರ್ಪಾಡು ಗೊಳಿಸಿಲ್ವಾ ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಕೋಡಿ ಸೇತುವೆ ಭಾಗ ಸೇರಿದಂತೆ ಕೆಲವು ಭಾಗಗಳಲ್ಲಿ ರಾತ್ರಿ ಹೊತ್ತಿನಲ್ಲಿ ಡ್ರಿಂಕ್ ಮಾಡಿ ಆ ಸ್ಥಳದಲ್ಲಿ ಮಲಿನಗೊಳಿಸುವ ವ್ಯವಸ್ಥೆಯಾಗುತ್ತಿದೆ ಈ ಬಗ್ಗೆ ಪೋಲಿಸ್ ಇಲಾಖೆ ರಾತ್ರಿ ಹೊತ್ತಿನಲ್ಲಿ ರೌಂಡ್ಸ್ ವ್ಯವಸ್ಥೆ ಬಿಗಿಗೊಳಿಸಲು ಗ್ರಾಮಸಭೆ ಆಗ್ರಹಿಸಿತು.
ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಕೋಟ ಆರಕ್ಷಕ ಠಾಣೆಯ ಎ.ಎಸ್ ಐ ರವಿ ಕುಮಾರ್ ಭರವಸೆ ನೀಡಿದರಲ್ಲದೆ ಇತ್ತೀಚಿಗೆ ಸರಣಿ ಕಳವು ಪ್ರಕರಣಗಳು ಹೆಚ್ಚುತ್ತಿದ್ದು , ನಿವಾಸಿಗಳಿಲ್ಲ ಮನೆಯೇ ಟಾರ್ಗೆಟ್ ಮಾಡಲಾಗುತ್ತಿದೆ ಈ ಬಗ್ಗೆ ಅಪರಿಚಿತ ವ್ಯಕ್ತಗಳು ಕಂಡುಬAದರೆ ಇಲಾಖೆಗೆ ಮಾಹಿತಿ ನೀಡಿ ಇಲ್ಲ ೧೧೨ಗೆ ಕರೆ ಮಾಡಿ ಎಂದರು.
ಇನ್ನುಳಿದAತೆ ಸ್ಥಳೀಯ ವ್ಯಾಪ್ತಿಯಲ್ಲಿ ಮನೆಯ ವ್ಯಾಪ್ತಿಯ ಹೆಚ್ಚಿನಭಾಗಳಲ್ಲಿರಸ್ತೆ ಸಮಸ್ಯೆಗಳ ಕುರಿತು ಸಭೆಯಲ್ಲಿ ಗಮನ ಸೆಳೆದರು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ,ಸದಸ್ಯರು ಉಪಸ್ಥಿತರಿದ್ದರು. ನೋಡೆಲ್ ಅಧಿಕಾರಿಯಾಗಿ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ರೋಶನ್ ಭಾಗವಹಿಸಿದರು. ಗ್ರಾಮಸಭೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ನಿರ್ವಹಿಸಿದರು.

