Home » ಕೋಡಿ ಶ್ರೀರಾಮ ನಗರದ ಗಣೇಶೋತ್ಸವ : ಬೆಳ್ಳಿ ಹಬ್ಬದ ಸಂಭ್ರಮ
 

ಕೋಡಿ ಶ್ರೀರಾಮ ನಗರದ ಗಣೇಶೋತ್ಸವ : ಬೆಳ್ಳಿ ಹಬ್ಬದ ಸಂಭ್ರಮ

by Kundapur Xpress
Spread the love

ಕುಂದಾಪುರ ; ಕುಂದಾಪುರ ಪುರಸಭಾ ವ್ಯಾಪ್ತಿಯ ಕೋಡಿ ಶ್ರೀರಾಮ ನಗರದ ನಾಗೇಶ ಕಾಮತ್ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಪ್ರಾರಂಭಗೊಂಡ ಸಾರ್ವಜನಿಕ ಗಣೇಶೋತ್ಸವು 25ನೇ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದೆ.

ಕೋಡಿ ಗಣೇಶೋತ್ಸವವೂ ಧರ್ಮ ಜಾಗೃತಿ, ದೇಶ ಭಕ್ತಿ, ಸಾಮಾಜಿಕ ಸಾಮರಸ್ಯ, ಸಮಾಜ ಸೇವೆಗಳಿಗೆ ಹೆಸರುವಾಸಿಯಾಗಿದ್ದು ಅಗಸ್ಟ್‌ 27 ರಿಂದ ಅ. 30 ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕೆಮಗಳು ಜರುಗಲಿದೆ

ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೊಡು ಇವರಿಂದ “ನಾಗಮಂಡಲ ಯಕ್ಷಗಾನ”, ಓಂಕಾರ ಕಲಾವಿದರು ಕಣ್ಣುಕೆರೆ ಇವರಿಂದ “ಆಪುದೆಲ್ಲಾ ಒಳ್ಳೆದಕ್ಕೆ” ಎನ್ನುವ ಹಾಸ್ಯಮಯ ನಾಟಕ ನಡೆಯಲಿದ್ದು, ಮೂರು ದಿನಗಳ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿರುವುದು.

ದಿನಾಂಕ: 30 ರಂದು ಸಂಜೆ ನಡೆಯಲಿರುವ ಪುರಮೆರವಣಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಸಾಮಾಜಿಕ ಸಂದೇಶ ಸಾರುವ ಟ್ಯಾಬ್ಲೂಗಳು, ಚಂಡೆವಾದನ, ತಟ್ಟಿರಾಯ, ಡೊಳ್ಳುಕುಣಿತ, ಕೀಲು ಕುದುರೆ, ವೀರಗಾಸೆ, ಮರಕಾಲು ನರ್ತನ, 50ಕ್ಕೂ ಹೆಚ್ಚು ತಂಡಗಳಿಂದ ಭಜನೆ, ಅಸ್ಲಾಂ ನೃತ್ಯ, ಮಣಿಪುರ ನೃತ್ಯ, ನಾಸಿಕ ಬ್ಯಾಂಡ್ ಮೊದಲಾದ ಕಲಾ ಪ್ರಕಾರಗಳೊಂದಿಗೆ ಅದ್ದೂರಿಯಾಗಿ ಶೋಭಾಯಾತ್ರೆ  ನಡೆಯಲಿರುವುದೆಂದು ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 

Related Articles

error: Content is protected !!