ಕೋಟ : ಕೋಡಿ ಗ್ರಾಮ ಪಂಚಾಯತ್ ಮುಂಬಾಗದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿಜೆಪಿಯವರ ಸುಳ್ಳಿನ ಪ್ರತಿಭಟನೆಯ ವಿರುದ್ಧ ಕಾಂಗ್ರೆಸ್ ಪಕ್ಷದ ಸತ್ಯದರ್ಶನ ಪ್ರತಿಭಟನೆಯನ್ನು ನಡೆಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ನಾಗೇಶ್ ಉದ್ಯಾವರ ಬಾಗವಹಿಸಿ ಬಿಜೆಪಿಯವರು ಹೇಳಿದ ಸುಳ್ಳಿನ ಬಗ್ಗೆ ವಿವರಣೆಯನ್ನು ನೀಡಿ ಸಾರ್ವಜನಿಕರಿಗೆ ಸತ್ಯದರ್ಶನವನ್ನು ಬಿಚ್ಚಿಟ್ಟು ರಾಜ್ಯದ ಗ್ಯಾರಂಟಿ ಯೋಜನೆಗಳು ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಗಳಲ್ಲಿ ಜಾರಿಗೆ ತಂದAತ ಎಲ್ಲಾ ಯೋಜನೆಗಳನ್ನು ಜನರಿಗೆ ತಿಳಿಸಿ ಬಡವರ ಪರವಾದ ಎಲ್ಲಾ ಯೋಜನೆಗಳನ್ನು ದೇಶ ಹಾಗೂ ರಾಜ್ಯ ಕೊಡುಗೆ ನೀಡಿದ್ದು ಕಾಂಗ್ರೆಸ್ ಪಕ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಬಡವರ ಪರವಾಗಿ ಯಾವುದೇ ಯೋಜನೆಗಳನ್ನು ನೀಡದೆ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಬಡವರಿಂದ ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ ಗ್ಯಾರಂಟಿಗಳು ರದ್ದಾದರೆ ಮುಂದೆ ನಾವು ಅಧಿಕಾರಕ್ಕೆರಬಹುದೆಂದು ಹಪ್ಪಹಪಿಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಎ ಕುಂದರ್, ಕೊಡಿ ಗ್ರಾಮೀಣ ಸಮಿತಿ ಅಧ್ಯಕ್ಷ ಶಂಕರ್ ಬಂಗೇರ, ಪಂಚಾಯತ್ ಸದಸ್ಯರಾದ ಅಂತೋನಿ ಡಿಸೋಜ, ಕೃಷ್ಣಪ್ಪ ಬಂಗೇರ, ಮಹೇಶ್ ಪೂಜಾರಿ, ಸುಧಾ ಪೂಜಾರಿ ಹಾಗೂ ಪ್ರಮುಖ ಮುಖಂಡರು ಇದ್ದರು.

