Home » ಕೊಲ್ಲೂರು : ದೇವಸ್ಥಾನದಲ್ಲಿ ಕಳವಾದ ಚಿನ್ನದ ಸರ ಮತ್ತು ಹಣದ ಪರ್ಸ್‌ ಹಸ್ತಾಂತರ
 

ಕೊಲ್ಲೂರು : ದೇವಸ್ಥಾನದಲ್ಲಿ ಕಳವಾದ ಚಿನ್ನದ ಸರ ಮತ್ತು ಹಣದ ಪರ್ಸ್‌ ಹಸ್ತಾಂತರ

by Kundapur Xpress
Spread the love

ಕೊಲ್ಲೂರು: ಉಡುಪಿ ಜಿಲ್ಲೆಯ ‌ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕಳವಾದ ಚಿನ್ನದ ಸರ ಮತ್ತು ಹಣದ ಪರ್ಸ್‌ನ್ನು ಎರಡೇ ಗಂಟೆಗಳಲ್ಲಿ ಪತ್ತೆ ಹಚ್ಚಿರುವ ಕೊಲ್ಲೂರು ಠಾಣಾ ಪೊಲೀಸರು ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ.

ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೇರಳ ರಾಜ್ಯದ ಭಕ್ತರೊಬ್ಬರ ಪರ್ಸ್ ಕಳವಾಗಿತ್ತು.

ಪರ್ಸ್ ನಲ್ಲಿ 2 ಚಿನ್ನದ ಸರ ಹಾಗೂ ಹಣವಿತ್ತು. ಅಲ್ಲಿನ ಸಿಸಿ ಟಿವಿ ಕ್ಯಾಮರಾ ಆಧಾರದಲ್ಲಿ ಪೊಲೀಸರು ಅದನ್ನು ಎರಡು ಗಂಟೆಗಳಲ್ಲಿ ಪತ್ತೆ ಹಚ್ಚಿದ್ದಾರೆ.

ಪಿಎಸ್ಸೆ ಭೀಮಾಶಂಕರ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

 

Related Articles

error: Content is protected !!