ಕೋಟ : ಸಮುದಾಯದ ಏಳಿಗೆಗೆ ಇಂಥಹ ಸಂಗಮ ಸಹಕಾರಿ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ಹೇಳಿದರು. ಸಾಲಿಗ್ರಾಮ ಶ್ರೀ ಗುರು ನರಸಿಂಹದ ಕೂಟ ಬಂಧು ಭವನದಲ್ಲಿ ಭಾನುವಾರ ಉಡುಪಿ ಜಿಲ್ಲೆಯ ವಲಯ ಒಂದರ ಕೂಟ ಮಹಾಜಗತ್ತು ವಿವಿಧ ಅಂಗಸಂಸ್ಥೆಗಳ ಸಮಾವೇಶ ಸಂಗಮ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಗಿನ ಹಿರಿಯರ ಪರಿಶ್ರಮದಿಂದ ಕೂಟ ಮಹಾಜಗತ್ತು ಶ್ರೀ ದೇಗುಲದ ಮೂಲಕ ಕೆ.ಪಿ ಹೊಳ್ಳರಂತವರ ಗಟ್ಟಿ ತಳಹದಿಯನ್ನು ಪಡೆದುಕೊಂಡು ಇಂದಿಗೂ ವಿವಿಧ ವಲಯಗಳ ಸಮುದಾಯದ ಅಭಿವೃದ್ಧಿ ಪ್ರೇರಕದಾಯಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮೂವರು ಹಿರಿಯ ಸಮುದಾಯದ ಮುಖಂಡರುಗಳಾದ ಐರೋಡಿ ಜಗದೀಶ್ ಕಾರಂತ್,ಡಾ.ಕೆ.ಪಿ ಹೊಳ್ಳ,ಬಿ.ನಾರಾಯಣ ಸೋಮಯಾಜಿ ಇವರುಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕೂಟಮಹಾಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಉಪಾಧ್ಯಕ್ಷ ಗಣೇಶ್ ಮೂರ್ತಿ ನಾವಡ ,ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ,ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಕೋಶಾಧಿಕಾರಿ ವಾಸುದೇವ ಸೋಮಯಾಜಿ,ಪ್ರಧಾನಕಾರ್ಯದರ್ಶಿ ರಮೇಶ್ ರಾವ್,ಕೇಂದ್ರ ಸಂಸ್ಥೆಯ ಉಪಾಧ್ಯಕ್ಷ ಚಂದ್ರಶೇಖರ್ ಐತಾಳ್, ಕೂಟ ಮಹಾಜಗತ್ತು ಅಂಗಸಂಸ್ಥೆ ಉಡುಪಿ ಅಂಗಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಹೊಳ್ಳ,ಕುಂದಾಪುರ ಅಂಗಸಂಸ್ಥೆಯ ಅಧ್ಯಕ್ಷ ಯು ಲಕ್ಷ್ಮೀನಾರಾಯಣ ವೈದ್ಯ,ಕಮಲಶಿಲೆ ಅಂಗಸಂಸ್ಥೆಯ ಅಧ್ಯಕ್ಷ ಕೆ.ನಾರಾಯಣ ರಾವ್,ಕಿರಿಮಂಜೇಶ್ಚರ ಅಂಗಸಂಸ್ಥೆಯ ಅಧ್ಯಕ್ಷ ಬಿ.ಸಿ ಗಣೇಶ್ ಮಯ್ಯ,ಗೋಕರ್ಣ ಅಂಗಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ಚಂದ್ರಶೇಖರ್ ಅಡಿ,ಕೇಂದ್ರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಕೆ.ತಾರಾನಾಥ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು. ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಅಧ್ಯಕ್ಷ ಶ್ರೀಪತಿ ಅಧಿಕಾರಿ ಸ್ವಾಗತಿಸಿದರು. ಕೂಟಮಹಾಜಗತ್ತು ವಲಯ ಒಂದರ ಸಂಘಟನಾಕಾರ್ಯದರ್ಶಿ ಸಿ.ರಮೇಶ್ ತುಂಗ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಕೂಟ ಮಹಾಜಗತ್ತು ಅಂಗಸಂಸ್ಥೆ ಮಂಜುನಾಥ್ ಉಪಾಧ್ಯಾ ನಿರೂಪಿಸಿದರು. ಕೂಟಮಹಾಜಗತ್ತು ಅಂಗಸಂಸ್ಥೆ ಕುಂದಾಪುರ ವಲಯದ ಕಾರ್ಯದರ್ಶಿ ಅವನಿಶ್ ಹೊಳ್ಳ ವಂದಿಸಿದರು.