ಕೋಟ : ಮಹಿಳಾ ಮಂಡಲ ಕೋಟ ತನ್ನ ಅರವತ್ತರ ಸಡಗರದಲ್ಲಿ ನೀಡುವ ಸಾಧನ ಪುರಸ್ಕಾರವನ್ನು ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟರವರಿಗೆ ನೀಡಿ ಗೌರವಿಸಲಿದೆ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ಕಥೆಗಾರ, ವಿಮರ್ಶಕ, ಲೇಖಕ, ಅಂಕಣ ಬರಹಗಾರ, ನಿರೂಪಕ, ನಟ, ರಾಜ್ಯ ಸಂಪನ್ಮೂಲ ವ್ಯಕ್ತಿ, ಕಿರುಚಿತ್ರಗಳ ನಿರ್ಮಾಪಕ, ಶಿಕ್ಷಣ ಕ್ಷೇತ್ರಗಳ ಕಲಿಕೆಯ ನಾವೀನ್ಯ ವಿನ್ಯಾಸಗಾರ, ಕಾದಂಬರಿಕಾರ ೫೦ ಮಿಕ್ಕಿದ ಲೇಖನಗಳ ಮತ್ತು ೨೮ ಕೃತಿಗಳ ರಚನಕಾರ ಕಾರಂತ ಥೀಮ್ ಪಾರ್ಕಿನ ಕಾರ್ಯಕ್ರಮಗಳ ರೂವಾರಿ ಅಂತರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಂಡ ‘ಸುಗಂಧಿ’ ಚಲನಚಿತ್ರದ ನಿರ್ಮಾಪಕ ಸದಾ ಹೊಸ ಆವಿಷ್ಕಾರದ ಚಿಂತಕರಾಗಿರುವ ಶ್ರೀಯುತರಿಗೆ ನೀಡಿ ಗೌರವಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.