ಕೋಟ : ಕೋಟ ಉಪವಿಭಾಗ ವ್ಯಾಪ್ತಿಯ ಮೆಸ್ಕಾಂ ಜನಸಂಪರ್ಕ ಸಭೆಯು ಕೋಟದ ಉಪವಿಭಾಗದ ಸಭಾಂಗಣದಲ್ಲಿ ಜರಗಿತು. ಜನಸಂಪರ್ಕಸಭೆ ಆರಂಭಗೊಂಡರೂ ಗ್ರಾಹಕರ ಅನುಪಸ್ಥಿತಿ ಎದ್ದುಕಾಣುತ್ತಿತ್ತು.ಬೆರಳೆಣಿಕೆಯ ಗ್ರಾಹಕರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಸಭೆಯಲ್ಲಿ ಬಿಚ್ಚಿಟ್ಟರು.
ಕೋಟದ ಪರಿಸರವಾದಿ ಕೋ.ಗಿನಾ ಕೋಟ ಉಪವಿಭಾಗ ಸ್ವಂತ ಕಛೇರಿ ಮಂಜುರಾತಿ ಆದೇಶಗೊಂಡ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರು ಕಾಮಗಾರಿ ಇನ್ನು ಆರಂಭಗೊಂಡಿಲ್ಲ ಹಾಗಾದರೆ ಸಮಸ್ಯೆ ಏನು ಇನ್ನು ಬಾಡಿಗೆ ಕೂರುತ್ತಿದ್ದಿರಾ ಕಟ್ಟಡ ಮಾಡುವ ಯೋಗ್ಯತೆ ಇಲ್ಲದಿದ್ದ ಮೇಲೆ ಮಂಜೂರಾತಿ ಆದೇಶ ಯಾಕೆ ನೀಡಬೇಕಿತ್ತು ಇದು ಸಾರ್ವಜನಿಕರ ಕಣ್ಣಿಗೆ ಮಣ್ಣೆರೆಚುವ ತಂತ್ರವೇ ಎಂದು ಪ್ರಶ್ನಿಸಿದರಲ್ಲದೆ ಕೋಟದಲ್ಲಿ ಮೆಸ್ಕಾಂ ಸರ್ವಿಸ್ ಸ್ಟೇಷನ್ ಸೃಷ್ಠಿಸಿದ್ದಿರಿ ಆದರೆ ಅಲ್ಲಿ ಸಮರ್ಪಕ ಸಿಬ್ಬಂದಿಗಳನ್ನು ನೇಮಕಗೊಳಿಸಿಲ್ಲ ನಾಮಕಾವಸ್ತೆಗೆ ಈ ಯೋಜನಯೇ ಎಂದು ಪ್ರಶ್ನಿಸಿದರು.
ಈ ಬಗ್ಗೆ ಮಾತನಾಡಿದ ಮೆಸ್ಕಾಂ ಉಡುಪಿ ಸಹಾಯ ಅಧೀಕ್ಷಕ ದಿನೇಶ್ ಉಪಾಧ್ಯಾಯ ದಿನೇಶ್ ಉಪಾಧ್ಯಾ ಉಪವಿಭಾಗದ ಟೆಂಡರ್ ಪ್ರಕ್ರಿಯೆಲ್ಲಿ ಲೋಪವಾಗಿದೆ ಪುನಃ ಈ ಪ್ರಕ್ರಿಯೆಗೊಳಿಸಬೇಕಿದೆ ಎಂದು ಉತ್ತರಿಸಿದರು.
ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಖಾಸಗಿ ಸ್ಥಳದ ವಿವಿಧ ಭಾಗಗಳಲ್ಲಿರುವ ಹಳೆ ಕಂಬಗಳನ್ನು ತೆರವುಗೊಳಿಸಲು ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ ಮನವಿ ಮಾಡಿದರು.
ಪಿ.ಎಂ ಹರ್ ಗರ್ ಸೋಲಾರಿಕರಣಗೊಳಿಸಲು ಕೋಟತಟ್ಟು ಗ್ರಾಮಪಂಚಾಯತ್ ಅವಕಾಶ ಕಲ್ಪಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಉಲ್ಲೇಖಿಸಿದ ಹಿನ್ನಲ್ಲೆಯಲ್ಲಿ ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಬಾರಿಕೆರೆ ಯೋಜನೆ ಅನುಷ್ಠಾನದ ಕುರಿತಂತೆ ಮಾಹಿತಿ ಪಡೆದುಕೊಂಡರು.
ಮೆಸ್ಕಾಂ ಉಡುಪಿ ಸಹಾಯ ಅಧೀಕ್ಷಕ ದಿನೇಶ್ ಉಪಾಧ್ಯಾಯ, ಕಾರ್ಯ ವಾಹಕ ಸಹಾಯಕ ಇಂಜಿನಿಯರ್ ಯಶವಂತ್
ಕೋಟ ವಿಭಾಗದ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಪ್ರತಾಪ್‌ಚಂದ್ರ ಶೆಟ್ಟಿ ಸಹಾಯಕ ಇಂಜಿನಿಯರ್ ಶ್ರೀಕಾಂತ್,
ವಿವಿಧ ಶಾಖಾಧಿಕಾರಿಗಳಾದ ಮಹೇಶ್,ವೈಭವ್ ಶೆಟ್ಟಿ ಕೋಟ ಉಪವಿಭಾಗದ ಲೆಕ್ಕಾಧಿಕಾರಿ ಗಣೇಶ್ ಮೊದಲಾದವರು
ಸಭೆಯಲ್ಲಿ ಉಪಸ್ಥಿತರಿದ್ದರು.

