Home » ಕೋಟ ಶಿವರಾಮ ಕಾರಂತರ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಬಿಡುಗಡೆ
 

ಕೋಟ ಶಿವರಾಮ ಕಾರಂತರ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಬಿಡುಗಡೆ

by Kundapur Xpress
Spread the love

ಕೋಟ : ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗದ ಕೋಟ ಉಪ ಅಂಚೆ ಕಚೇರಿಯಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕöÈತ ಕೋಟ ಶಿವರಾಮ ಕಾರಂತರ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಮೇ. 30 ರಂದು ಬಿಡುಗಡೆಗೊಂಡಿತು.

ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ರಮೇಶ್ ಪ್ರಭು ರವರು ಇದನ್ನು ಬಿಡುಗಡೆಗೊಳಿಸಿ ನಾಡು ಕಂಡ ಶ್ರೇಷ್ಠ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕöÈತ,ಯಕ್ಷಗಾನ ಲೋಕದ ವಿಸ್ಮಯ, ಕಡಲ ತೀರದ ಭಾರ್ಗವ ಕೋಟ ಶಿವರಾಮ ಕಾರಂತರ ವಿಶೇಷತೆ ಜನ ಮಾನಸದಲ್ಲಿ ಹಸಿರಾಗಿರಲು ಹಾಗೂ ಅವರ ವ್ಯಕ್ತಿತ್ವ ಸದಾ ನೆನಪಿನಲ್ಲಿರಲು ಭಾರತೀಯ ಅಂಚೆ ಇಲಾಖೆ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್ ( ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು )ನ ಮೂಲಕ ಗೌರವ ಸಲ್ಲಿಸುತ್ತಿದೆ ಎಂದರು. ಯಾವುದೇ ಅಂಚೆ ಪರಿಕರಗಳ ಮೇಲೆ ಉಚಿತವಾಗಿ ಈ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್ ಬಳಸಬಹುದಾಗಿದ್ದು ಜನ ಸಾಮಾನ್ಯರು, ಕಾರಂತರ ಅಭಿಮಾನಿಗಳು ಹಾಗೂ ಅಂಚೆ ಸಂಗ್ರಹಣಾಕಾರರು ಹೆಚ್ಚಿನ ಸಂಖ್ಯೆ ಯಲ್ಲಿ ಇದನ್ನು ಕವರ್, ಕಾರ್ಡ್, ಇನ್ ಲ್ಯಾಂಡ್ ಲೆಟರ್ ಹೀಗೆ ಎಲ್ಲಾ ಅಂಚೆ ಪರಿಕರಗಳ ಮೇಲೆ ಮುದ್ರಿಸಿಕೊಂಡು ಅವರ ಹೆಸರು ಹಾಗೂ ಕೋಟ ಊರಿನ ಹೆಸರನ್ನು ಇನ್ನಷ್ಟು ಪ್ರಚುರ ಪಡಿಸಬಹುದು ಎಂದರು.

ಹಿರಿಯ ಅಂಚೆ ಚೀಟಿ ಸಂಗ್ರಾಹಕ ಎಮ್ ಕೃಷ್ಣಯ್ಯ ಹಾಗೂ ಕೋಟ ಅಂಚೆ ಕಚೇರಿಯ ಉಪ ಅಂಚೆ ಪಾಲಕ ಜಯಪ್ರಕಾಶ್ ಶುಭ ಹಾರೈಸಿದರು. ಮಹೇಶ್ ಪ್ರಾರ್ಥಿಸಿದರು. ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ದಯಾನಂದ ದೇವಾಡಿಗ ಸ್ವಾಗತಿಸಿ ಉಪ ಅಂಚೆ ನಿರೀಕ್ಷಕ ಶಂಕರ್ ಲಮಣಿ ಧನ್ಯವಾದವಿತ್ತರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಪೂರ್ಣಿಮಾ ಜನಾರ್ದನ್ ನಿರೂಪಿಸಿ, ಉಡುಪಿ ಅಂಚೆ ವಿಭಾಗೀಯ ಕಚೇರಿಯ ಪ್ರಜ್ವಲ್ ಸಹಕರಿಸಿದರು

 

Related Articles

error: Content is protected !!