Home » ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ : ನಿಧಿ ಪೈ ಎಂ.
 

ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ : ನಿಧಿ ಪೈ ಎಂ.

by Kundapur Xpress
Spread the love

ಕೋಟ : ಈ ಬಾರಿ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸಿದ್ದೇನೆ. ಈ ಯಶಸ್ಸಿಗೆ ಕಾರಣ ನನ್ನ ದಿನ ನಿತ್ಯದ ಪಠಣ, ಶಾಲೆಯ ಶಿಕ್ಷಕರ ಮಾರ್ಗದರ್ಶನ ಮತ್ತು ಮನೆಯಲ್ಲಿನ ಶಿಸ್ತಾದ ವಾತಾವರಣ. ಪಠ್ಯಕ್ರಮದ ಓದು ಜೊತೆಗೆ ಮಾದರಿ ಪ್ರಶ್ನೆಪತ್ರಿಕೆಗಳು, ಟಿಪ್ಪಣಿಗಳು ಸಾಕಷ್ಟು ಉಪಯುಕ್ತವಾಯಿತು. ನಮ್ಮ ಶಾಲೆಯಲ್ಲಿ ನಡೆಸಿದ ಪೂರ್ವಭಾವಿ ಪರೀಕ್ಷೆಗಳು ಹಾಗೂ ಪುನರಾವರ್ತನೆ ಪಾಠಗಳು ನನ್ನ ಆತ್ಮವಿಶ್ವಾಸವನ್ನು ಇನ್ನೂ ಹೆಚ್ಚಿಸಿತು. ಮುಂದೆ ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿ ವೈದ್ಯೆ ಆಗಿ ಜನರ ಸೇವೆ ಮಾಡಬೇಕೆಂದು ಕನಸು ಕಂಡಿದ್ದೇನೆ. ನನ್ನ ತಂದೆ ಶ್ರೀ ನಾರಾಯಣ ಪೈ ಅವರು ಕೃಷಿಕ ಮತ್ತು ತಾಯಿ ಶ್ರೀಮತಿ ಲಕ್ಷ್ಮೀ ಅವರು ಗೃಹಿಣಿ. ಫಲಿತಾಂಶ ದಿನ ಪೋಷಕರೊಂದಿಗೆ ಸಂಭ್ರಮಿಸುವ ಕ್ಷಣ ನನಗೆ ಅವಿಸ್ಮರಣೀಯವಾಗಿದೆ ಎಂದು ನಿಧಿ ಪೈ ಎಂ ತಿಳಿಸಿದಳು

 

Related Articles

error: Content is protected !!