Home » ಆರೋಗ್ಯ ಬಗ್ಗೆ ನಿರ್ಲಕ್ಷ್ಯ ಸಲ್ಲ – ಕೋಟ ಡಾ.ಮಾಧವ ಪೈ
 

ಆರೋಗ್ಯ ಬಗ್ಗೆ ನಿರ್ಲಕ್ಷ್ಯ ಸಲ್ಲ – ಕೋಟ ಡಾ.ಮಾಧವ ಪೈ

by Kundapur Xpress
Spread the love

ಕೋಟ : ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ ವೈದ್ಯರ ಸಲಹೆ ಕಡ್ಡಾಗವಾಗಿ ಪಡೆಯಿರಿ ಎಂದು ಕೋಟದ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಕೋಟ ಮಾಧವ ಪೈ ಹೇಳಿದರು
ಭಾನುವಾರ ಸಾಸ್ತಾನದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಮತ್ತು ಕೋಟದ ಪಂಚವರ್ಣ ಮಹಿಳಾ ಮಂಡಲ ಜಂಟಿ ಆಶ್ರಯದಲ್ಲಿ ಅರಿವು ನಿಮಗಿರಲಿ ನೆರವು 13ನೇ ಮಾಲಿಕೆ ಕಾರ್ಯಕ್ರಮದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಆರೋಗ್ಯ ಎಂಬ ವಿಷಯದಲ್ಲಿ ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿ ನಾವಿದ್ದೇವೆ ಆದರೆ ನಮ್ಮ ಆಹಾರ ಪದ್ಧತಿ ನಮ್ಮಿಂದಲೇ ಬದಲಾಗಿದೆ, ಇದು ಹಲವು ರೀತಿಯ ಖಾಯಿಲೆಗಳ ಆಹ್ವಾನಕ್ಕೆ ಕಾರಣವಾಗಿದೆ ಪ್ರಸ್ತುತ ಜಂಕ್ ಫುಡ್ ಹಾವಳಿಯಿಂದ ಮನುಕುಲದ ಮೇಲೆ ವ್ಯತಿರಿಕ್ತ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇವೆ ಅಲ್ಲದೆ ಹೊಸ ಹೊಸ ಖಾಯಿಲೆಗಳಿಗೆ ಆಹ್ವಾನ ನೀಡುವಂತ್ತಾಗಿದೆ.ಹಿಂದಿನ ಆಹಾರ ಕ್ರಮಗಳಿಂದ ನಾವುಗಳು ಕ್ಷೆಮವಾಗಿದ್ದೇವೆ ಆದರೆ ಇಂದಿನ ಆಹಾರ ಕ್ರಮಗಳಿಂದ ಬಾರಿ ಸಮಸ್ಯೆ ಎದುರಿಸುತ್ತಿದ್ದೇವೆ ಸ್ತ್ರೀ ರೋಗ ,ಸಂತಾನ ಸಮಸ್ಯೆ ,ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಅತಿಯಾಗಿ ಕಾಣುತ್ತಿದ್ದೇವೆ ಇದಕ್ಕೆಲ್ಲ ನಮ್ಮ ಆಹಾರ ಕ್ರಮಗಳ ಬದಲಾಣೆ ಹೊರತು ಇನ್ನೆನ್ನಲ್ಲ ಆದ್ದರಿಂದ ಆರೋಗ್ಯಕರ ಆಹಾರ ,ಕಾಲಕ್ಕೆ ಅನುಗುಣವಾಗಿ ಆರೋಗ್ಯ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಕಂಡುಕೊಳ್ಳಿ,ನೇತ್ರದಾನಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಕರೆಕೊಟ್ಟರು.

ಸಾಸ್ತಾನ ಕೆನರಾ ಬ್ಯಾಂಕ್ ಅಧಿಕಾರಿ ದೀಪಿಕಾ ಕೃಷ್ಣ ಪ್ರಸ್ತುತ ಸರಕಾರದಿಂದ ಹಾಗೂ ಬ್ಯಾಂಕ್‌ಗಳ ಯೋಜನೆಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಕಲ್ಲತರು ಮಹಿಳಾ ಸ್ವಸಹಾಯ ಸಂಘದ ಮಹಿಳೆಯರಿಗೆ ಸಮಗ್ರ ಮಾಹಿತಿ ಈ ಕಾರ್ಯಕ್ರಮದಲ್ಲಿ ನೀಡಲಾಯಿತು.
ಅಧ್ಯಕ್ಷತೆಯನ್ನು ಬಿಲ್ಲವ ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘದ ಗೌರವ ಸಲಹೆಗಾರ ಚೆನ್ನಯ್ಯ ಪೂಜಾರಿ,ಬಿಲ್ಲವ ಯುವ ವೇದಿಕೆ ಮಾಜಿ ಅಧ್ಯಕ್ಷ ರವಿ ಪೂಜಾರಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಕಲ್ಪತರು ಸ್ವಸಹಾಯ ಸಂಘದ ಸೀಮಾ ವಿಜಯ ಪೂಜಾರಿ ಸ್ವಾಗತಿಸಿದರು. ಉಷಾ ಗಣೇಶ್ ಪೂಜಾರಿ ವಂದಿಸಿದರು. ಕಾರ್ಯಕ್ರಮವನ್ನು ಬಿಲ್ಲವ ಯುವ ವೇದಿಕೆ ಮುಖಂಡ ಸುರೇಶ್ ಪೂಜಾರಿ ನಿರೂಪಿಸಿದರು.

 

Related Articles

error: Content is protected !!