ಕೋಟೇಶ್ವರ : ಸಂಸದೀಯ ಪ್ರಜಾಪ್ರಭುತ್ವದ ತತ್ತ್ವಗಳನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಪ್ರಜೆಗಳ ಜವಾಬ್ದಾರಿಯನ್ನು ಅರಿಯಲು ಅನುವಾಗಲು ಕೆ.ಪಿ.ಎಸ್ ಕೋಟೇಶ್ವರದ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಸಂಸತ್ತಿಗೆ ಚುನಾವಣೆ ಜರುಗಿತು.
ವಿದ್ಯಾರ್ಥಿ ನಾಯಕನಾಗಿ ಹತ್ತನೇ ತರಗತಿಯ ವಿವೇಕ್,ಶಾಲಾ ನಾಯಕಿಯಾಗಿ ಸಂಜನಾ,ಶಾಲಾ ಉಪ ನಾಯಕನಾಗಿ ಶ್ರೇಯಸ್ ವಿದ್ಯಾರ್ಥಿಗಳಿಂದ ಭಾರಿ ಬಹುಮತದೊಂದಿಗೆ ಚುನಾಯಿತರಾದರು.ಶಾಲಾ “ಚೇತನ”ಸಭಾಂಗಣದಲ್ಲಿ ಸ್ಥಾಪಿತವಾದ ಮತಗಟ್ಟೆಯಲ್ಲಿ ವಿದ್ಯಾರ್ಥಿಗಳು ಸಾಲುಗಟ್ಟಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿರವರು ಚುನಾವಣಾ ಆಯುಕ್ತರಾಗಿ ಮಾರ್ಗದರ್ಶನ ಮಾಡಿದರು.ಹಿರಿಯ ಶಿಕ್ಷಕಿ ಜಯಶ್ರೀ ಭಟ್ ಮತಗಟ್ಟೆ ಅಧ್ಯಕ್ಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.ಮೈಕ್ರೋ ಒಬ್ಸರ್ವರ್ ಆಗಿ ಶ್ರೀಕಾಂತ್, ಮತಗಟ್ಟೆ ಅಧಿಕಾರಿಗಳಾಗಿ ಅನುರಾಧ ,ಸಂಧ್ಯಾ ,ದಿವ್ಯಪ್ರಭ,ಚೈತ್ರ,ರೇಷ್ಮಾ,ಪೀತಾಂಬರಿ, ಸುಧಾಬಾಯಿ,ರಮಾನಂದ ನಾಯಕ್,ದೀಪಿಕಾ, ಪಲ್ಲವಿ,ನಯನ,ರಜನಿಯವರು ಕರ್ತವ್ಯ ನಿರ್ವಹಿಸಿದರು .ಮೊಬೈಲ್ ಇ.ವಿ. ಎಮ್ ಮೂಲಕ ತ್ವರಿತ ಹಾಗೂ ಅಚ್ಚುಕಟ್ಟಾಗಿ ಮತದಾನ ಪ್ರಕ್ರಿಯೆ ಜರುಗಿತು.
ದೈ.ಶಿ.ಶಿಕ್ಷಕರಾದ ಮಂಜುನಾಥ್ ಹೊಳ್ಳ ಹಾಗೂಉದಯ್ ಮಡಿವಾಳ ಎಂ ರವರು ಚುನಾವಣಾ ಬಿಗಿ ಬಂದೋಬಸ್ತ್ ಕರ್ತವ್ಯದ ಮೇಲ್ವಿಚಾರಣೆ ವಹಿಸಿದ್ದರು.ನಾಗರತ್ನ.ಎಂ ರವರು ಚುನಾವಣಾ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿದರು.ಚುನಾವಣಾ ಪೂರ್ವದಲ್ಲಿ ಚುನಾವಣಾ ಅಧಿಸೂಚನೆ ಪ್ರಕಟ,ಅಭ್ಯರ್ಥಿಗಳ ನಾಮಪತ್ರ ಸ್ವೀಕಾರ,ತಿರಸ್ಕಾರ, ಅಂಗೀಕಾರ ಚುನಾವಣಾ ಪ್ರಕ್ರಿಯೆಗಳು ಕ್ರಮಬದ್ಧವಾಗಿ ಜರುಗಿದವು.ತದನಂತರ ನಡೆದ ಚುನಾವಣಾ ಮತ ಎಣಿಕೆ ಕಾರ್ಯವು ಹಿರಿಯ ಶಿಕ್ಷಕಿ ಸುಚೇತಾ ಭಟ್ ಅವರ ಸುಪರ್ದಿಯಲ್ಲಿ ನಡೆಯಿತು. ಪೋಲಿಸ್ ಅಧಿಕಾರಿ ವೈಭವ್ ಶೇಟ್ ರ ನೇತೃತ್ವದ ಪೋಲಿಸ್ ಸರ್ಪಗಾವಲಿನಲ್ಲಿ ಮುಖ್ಯ ಚುನಾವಣಾ ಆಯುಕ್ತ ಉಪಪ್ರಾಂಶುಪಾಲ ಚಂದ್ರ ಶೇಖರ್ ಶೆಟ್ಟಿರವರು ಫಲಿತಾಂಶ ಘೋಷಿಸಿದರು.ವಿಜೇತ ಅಭ್ಯರ್ಥಿಗಳ ಪರವಾಗಿ ವಿದ್ಯಾರ್ಥಿ ಮತದಾರರು ಜಯಕಾರ ಹಾಕಿ ಸಂಭ್ರಮಿಸಿದರು.

