Home » ಕುಂದಾಪುರ : 94 ಸಿ ಅಡಿಯಲ್ಲಿ ಹಕ್ಕು ಪತ್ರ ವಿತರಣೆ
 

ಕುಂದಾಪುರ : 94 ಸಿ ಅಡಿಯಲ್ಲಿ ಹಕ್ಕು ಪತ್ರ ವಿತರಣೆ

by Kundapur Xpress
Spread the love

ಕುಂದಾಪುರದ :  ಕುಂದಾಪುರ ತಾಲ್ಲೂಕು ಪಂಚಾಯಿತಿಯ ಆಡಳಿತ ಸೌಧ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್‌ಕುಮಾರ ಕೊಡ್ಗಿ ಅವರು ಹಕ್ಕು ಪತ್ರ ವಿತರಿಸಿದರು. 
ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ವಾಸವಾಗಿರುವ ಫಲಾನುಭವಿಗಳಿಗೆ 94 ಸಿ ಅಡಿಯಲ್ಲಿ ಹಕ್ಕು ಪತ್ರ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ವಾಸ್ತವ್ಯದ ಹಕ್ಕುಪತ್ರ ಎಲ್ಲರಿಗೂ ಅಗತ್ಯವಾಗಿ ದೊರಕಬೇಕು. 94 ಸಿ. ಅಡಿಯಲ್ಲಿ ಅರ್ಜಿ ಹಾಕಿರುವ ಅರ್ಜಿದಾರರು ಹಕ್ಕು ಪತ್ರ ದೊರಕದೆ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಹಕ್ಕು ಪತ್ರ ಒದಗಿಸಲಾಗಿದೆ ಎಂದರು.

ಬ್ರಹ್ಮಾವರ ತಾಲೂಕು ಕೋಟ ಹೋಬಳಿಯ ಗ್ರಾಮಗಳ ವ್ಯಾಪ್ತಿಯ , 4 ಜನ ಅರ್ಹ ಫಲನುಭವಿಗಳಿಗೆ ಹಕ್ಕು ಪತ್ರ ಒದಗಿಸಲಾಗಿದ್ದು ಫಲಾನುಭವಿಗಳಾದ . ಶೀನ ನಾಯ್ಕ, ಯಡ್ತಾಡಿ ಗ್ರಾಮ, ಕೋಟ ಹೋಬಳಿ,,ಜಯಂತಿ ಶೆಡ್ತಿ, ಹೆಗ್ಗುಂಜೆ ಗ್ರಾಮ, ಕೋಟ ಹೋಬಳಿ ,ಅಶೋಕ ತಿಂಗಳಾಯ . ಸುಜಾತ ಸಂತೋಷ ತಿಂಗಳಾಯ, ಕೋಡಿ, ಕೋಟ ಹೋಬಳಿ,ಅಪ್ಪಿ ಮರಕಾಲ್ತಿ ಕೋಂ. ಗೋಪಾಲ ತಿಂಗಳಾಯ, ಕೋಡಿ, ಕೋಟ ಹೋಬಳಿ,,ಗ್ರಾಮದ ಫಲಾನುಭವಿಗಳು ತಮ್ಮ ವಾಸ್ತವ್ಯದ ಮನೆಯಡಿಯ ಭೂಮಿ ಹಕ್ಕು ಪತ್ರ ವಿತರಿಸಿದರು
ಈ ಸಂದರ್ಭದಲ್ಲಿ
ಬ್ರಹ್ಮಾವರ ತಹಸೀಲ್ದಾರರ ಶ್ರೀಕಾಂತ ಹೆಗಡೆ,,ಕುಂದಾಪುರ ತಹಶೀಲ್ದಾರರಾದ ಪ್ರದೀಪ್ ಕುರುಡೇಕರ್ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು

 

Related Articles

error: Content is protected !!