ಕುಂದಾಪುರ : ಸುಮಾರು ಒಂದು ವರ್ಷ ಐದು ತಿಂಗಳ ಕಾಲ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿನಯ್ ಕುಮಾರ್ ಇವರು ಕೊಲ್ಲೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಆಗಿ ಕುಂದಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ್ ಎಂಬವರು ಪೊಲೀಸ್ ಹೆಡ್ ಕಾಸ್ಟೇಬಲ್ ಆಗಿ ಕೋಟಾ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ
ಇವರ ಬಿಳ್ಕೊಡುಗೆ ಸಮಾರಂಭವು ಕುಂದಾಪುರ ನಗರದ ಪೊಲೀಸ್ ಠಾಣೆಯಲ್ಲಿ ಜರಗಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಠಾಣಾ ಪೊಲೀಸ್ ನಿರೀಕ್ಷಕರಾದ ನಂಜಪ್ಪ ವಹಿಸಿದ್ದರು ಹಾಗೂ ಸಭೆಯಲ್ಲಿ ನಂಜನಾಯ್ಕ್ ಪೊಲೀಸ್ ಉಪ ನಿರೀಕ್ಷಕರು ಕಾನೂನು ಸುವ್ಯವಸ್ಥೆ ವಿಭಾಗ, ಶ್ರೀಮತಿ ಪುಷ್ಪ ಪೊಲೀಸ್ ಉಪನಿರೀಕ್ಷಕರು ಅಪರಾಧ ವಿಭಾಗ ಮತ್ತು ಶ್ರೀಯುತ.ಪ್ರಸಾದ್ ಪೊಲೀಸ್ ಉಪನಿರೀಕ್ಷಕರು ಸಂಚಾರಿ ಪೊಲೀಸ್ ಠಾಣೆ ಹಾಗೂ ಸಭೆಯಲ್ಲಿ ಕುಂದಾಪುರ ಠಾಣೆಯ ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು
ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮಧುಸೂದನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು