Home » ಕುಂದಾಪ್ರ ಹುಲಿ : ದಿಲ್ಲಿಯಲ್ಲಿ ಕುಣಿತ ಪ್ರದರ್ಶನ
 

ಕುಂದಾಪ್ರ ಹುಲಿ : ದಿಲ್ಲಿಯಲ್ಲಿ ಕುಣಿತ ಪ್ರದರ್ಶನ

by Kundapur Xpress
Spread the love

ಕುಂದಾಪುರ: ಕರಾವಳಿಯಲ್ಲಿ ವಿಶಿಷ್ಟವಾದ ಆಚರಣೆ ಹೊಂದಿದ ಕುಂದಾಪ್ರ ಹುಲಿ ಕುಣಿತ ಅ.24ರಂದು ದಿಲ್ಲಿಯಲ್ಲಿ ಕುಣಿತ ಪ್ರದರ್ಶಿಸಲಿದೆ. ಕರಾವಳಿಯ ಇತರ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಯ ಇತರ ಕಡೆಗಳಲ್ಲಿ ನಡೆಯುವ ಹುಲಿ ಕುಣಿತಕ್ಕೂ ಕುಂದಾಪ್ರ ಹುಲಿಗೂ ವ್ಯತ್ಯಾಸ ಇದೆ. ಇಲ್ಲಿನ ಹುಲಿ ಕುಣಿತದ ಪರಂಪರೆಯೇ ಬೇರೆ.

ಕೇಂದ್ರ ಸಂಸ್ಕೃತಿ ಇಲಾಖೆ ಮತ್ತು ದಿಲ್ಲಿ ಕರ್ನಾಟಕ ಸಂಘ ದಿಲ್ಲಿಯ ಆಗಸ್ಟ್ ಕ್ರಾಂತಿ ಮಾರ್ಗದ ‘ಸಿರಿಪೋರ್ಟ್ ಅಡಿಟೋರಿಯಂನಲ್ಲಿ ಆಯೋಜಸುವ ರಾಣಿ ಚೆನ್ನಮ್ಮನವರ ಬ್ರಿಟಿಷರ ವಿರುದ್ಧ ಕಿತ್ತೂರು ವಿಜಯೋತ್ಸವದ ದ್ವಿಶತಮಾನೋತ್ಸವ ದಿನಾಚರಣೆಯಲ್ಲಿ ಕುಂದಾಪ್ರ ಹುಲಿ ಕುಣಿತ ಆಯೋಜಿಸಲಾಗಿದೆ.

ಶಾಸ್ತ್ರೀಯ ನೃತ್ಯ, ಭರತನಾಟ್ಯ,ಕಲಾವಿದರಿಂದ ಸಂಗೀತ ಕಾರ್ಯಕ್ರಮ ಇತ್ಯಾದಿ ನಡೆಯಲಿದ್ದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕಲಾವಿದರಿಂದ ಕುಂದಾಪುರದ ಪಾರಂಪರಿಕ ಹುಲಿವೇಷ ನರ್ತನ ಆಯೋಜಿಸಲಾಗಿದೆ. ಇದೇ ಮೊದಲ, ಬಾರಿ ಕುಂದಾಪ್ರ ಹುಲಿ ದಿಲ್ಲಿಯಲ್ಲಿ ಬಣ್ಣ ಹಚ್ಚಿಹೆಜ್ಜೆಯೂರಲಿದೆ. ಉಳಿದಂತೆ ಬೇಡರ ವೇಷ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ,ಅಗೋಲಿ ಇತ್ಯಾದಿಗಳಿವೆ.

 

Related Articles

error: Content is protected !!