Home » ರಜತಪೀಠ ಹಾಗೂ ಬೆಳ್ಳಿಯ ಪ್ರಭಾವಳಿಯ ಮೆರವಣಿಗೆ
 

ರಜತಪೀಠ ಹಾಗೂ ಬೆಳ್ಳಿಯ ಪ್ರಭಾವಳಿಯ ಮೆರವಣಿಗೆ

ಶಾಸಕ ಎ.ಕಿರಣ್ ಕೊಡ್ಗಿ ಚಾಲನೆ

by Kundapur Xpress
Spread the love

ಕುಂದಾಪುರ: ಕುಂದಾಪುರ ದಸರಾ ಮಹೋತ್ಸವ ಪ್ರಖ್ಯಾತಿ ಪಡಿದಿರುವ ಬ್ರಹ್ಮಶ್ರೀ ನಾರಾಯಣ ಗುರು ಯುವಕ ಮಂಡಲ ಇವರ 48ನೇ ಕುಂದಾಪುರ ದಸರಾ ಮಹೋತ್ಸವದ ಅಂಗವಾಗಿ ತಾಯಿ ಶಾರದ ಮಾತೆಗೆ ಅರ್ಪಿಸುವಂತಹ ಬೆಳ್ಳಿಯ ರಜತಪೀಠ ಹಾಗೂ ಬೆಳ್ಳಿಯ ಪ್ರಭಾವಳಿ ಮತ್ತು ಸಮರ್ಪಣ ಮೆರವಣಿಗೆ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು. ಶ್ರೀ ಶ್ರೀ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರು ಪೀಠಾಧೀಶರು ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಧರ್ಮಸ್ಥಳ ಇವರ ಉಪಸ್ಥಿತಿಯಲ್ಲಿ ಕುಂದಾಪುರ ಶಾಸ್ತ್ರಿ ವ್ರತದಿಂದ ರಜತ ಪೀಠ ಮತ್ತು ಬೆಳ್ಳಿಯ ಪ್ರಭಾವಳಿಯ ಮೆರವಣಿಗೆ ಚಾಲನೆ ಆಯೋಜಿಸಲಾಗಿದ್ದು ಈ ಮೆರವಣಿಗೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಚಾಲನೆ ನೀಡಿ ಪೂಜ್ಯನೀಯ ಸ್ವಾಮೀಜಿಯವರ ಆಶೀರ್ವಾದ ಪಡೆದರು.ತದನಂತರ ವೈಭವದ ಮೆರವಣಿಗೆ ಕುಂದಾಪುರದ ಮುಖ್ಯ ರಸ್ತೆಗಳ ಮೂಲಕ ಸಾಗಿ ಕುಂದಾಪುರ ನಾರಾಯಣಪುರ ಕಲ್ಯಾಣ ಮಂಟಪ ತಲುಪಿತು.ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಬಾಂಧವದ ಮುಖಂಡರು , ನಾರಾಯಣ ಗುರು ಯುವಕ ಮಂಡಲದ ಸದಸ್ಯರು ನೂರಾರು ಭಕ್ತ ಸಮೂಹ ನೆರೆದಿದ್ದರು.

 

Related Articles

error: Content is protected !!