Home » ಅತ್ಯಾಧುನಿಕ ಇಂಗ್ಲಿಷ್ ಲ್ಯಾಬ್ ಉದ್ಘಾಟನೆ
 

ಅತ್ಯಾಧುನಿಕ ಇಂಗ್ಲಿಷ್ ಲ್ಯಾಬ್ ಉದ್ಘಾಟನೆ

ಹೆಸಕುತ್ತೂರು ಪ್ರಾಥಮಿಕ ಶಾಲೆ

by Kundapur Xpress
Spread the love

ಕೋಟ : ಇಂಗ್ಲಿಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸಲು ಹೊಸ ಹೊಸ ಶೈಕ್ಷಣಿಕ ಪ್ರಯೋಗಗಳನ್ನು ಮಾಡುತ್ತ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಕಲಿಕೆಗೆ ಸರ್ವ ಸೌಲಭ್ಯಗಳನ್ನು ಒದಗಿಸುತ್ತಿರುವ ಹೆಸಕುತ್ತೂರು ಪ್ರಾಥಮಿಕ ಶಾಲೆಯ ಪ್ರಯತ್ನ ಅಭಿನಂದನೀಯ. ಇಲ್ಲಿ ವಿನೂತನವಾಗಿ ಸಿದ್ಧಪಡಿಸಲಾಗಿರುವ ಇಂಗ್ಲಿಷ್ ಲ್ಯಾಂಗ್ವೇಜ್ ಲ್ಯಾಬ್ ರಾಜ್ಯಕ್ಕೇ ಮಾದರಿಯಾದುದು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣಕುಮಾರ್ ಕೊಡ್ಗಿ ನುಡಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಇಲ್ಲಿ ಸಿದ್ಧಪಡಿಸಲಾಗಿರುವ ಅತ್ಯಾಧುನಿಕ ಹ್ಯಾಪಿ ಇಂಗ್ಲಿಷ್ ಇಂಗ್ಲಿಷ್ ಲ್ಯಾಂಗ್ವೇಜ್ ಲ್ಯಾಬ್ ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಈ ಇಂಗ್ಲಿಷ್ ಲ್ಯಾಂಗ್ವೇಜ್ ಲ್ಯಾಬ್ ನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಸಹಯೋಗ ಹಾಗೂ ಕೊಡುಗೆ ನೀಡಿದ ಒನ್ ಗುಡ್ ಸ್ಟೆಪ್ ಸಂಸ್ಥೆಯ ಸ್ಥಾಪಕರು ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅಮಿತಾ ಪೈ, ದಾನಿಗಳಾದ ಶ್ರೀ ಗಣೇಶ್ ಪ್ರಸಾದ್ ಕಾಂಚನ್, ನಿವೃತ್ತ ಶಿಕ್ಷಕರಾದ ಶ್ರೀ ಜಯರಾಮ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕ್ರಷ್ಣ ಕೆದ್ಲಾಯ ವಹಿಸಿದ್ದರು. ಕೊರ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮಾ ಎಲ್ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪಲ್ಲವಿ ಕುಲಾಲ, ಸದಸ್ಯರಾದ ರಾಘವೇಂದ್ರ ಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕöÈತ ನಿವೃತ್ತ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಶೆಟ್ಟಿ ಕೆ ಎನ್, ಶ್ರೀ ವಿನಾಯಕ ದೇವಸ್ಥಾನ ಗುಡ್ಡೆಟ್ಟು ಇದರ ಆಡಳಿತ ಮುಕ್ತೇಸರರಾದ ಅನಂತ ಪದ್ಮನಾಭ ಅಡಿಗ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಇದರ ಉಪ ಪ್ರಾಮ್ಶುಪಾಲರಾದ ಅಶೋಕ ಕಾಮತ್, ಕುಂದಾಪುರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಣೇಶ್ ಕುಮಾರ್ ಶೆಟ್ಟಿ, ಶಿಕ್ಷಣ ಸಂಯೋಜಕರಾದ ರಾಜಾ ಖಾರ್ವಿ, ಹುಣಸೆಮಕ್ಕಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ವಸಂತ್, ಸರಕಾರಿ ಪ್ರೌಢಶಾಲೆ ಹೆಸಕುತ್ತೂರು ಇದರ ಮುಖ್ಯ ಶಿಕ್ಷಕರಾದ ಅಬ್ದುಲ್ ರವೂಫ್, ಸಂಜೀವ ಕುಲಾಲ ಹೆಸಕುತ್ತೂರು, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ಎಂ, ಸಹಶಿಕ್ಷಕರಾದ ಜಯಲಕ್ಷಿ÷್ಮ ಬಿ, ವಿಜಯಾ ಆರ್, ರವೀಂದ್ರ ನಾಯಕ್, ಸ್ವಾತಿ ಬಿ, ಗೌರವ ಶಿಕ್ಷಕಿ ಮಧುರಾ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್ ಸ್ವಾಗತಿಸಿದರು. ಸಹ ಶಿಕ್ಷಕರಾದ ಅಶೋಕ ತೆಕ್ಕಟ್ಟೆ ನಿರೂಪಿಸಿದರು. ವಿಜಯ ಶೆಟ್ಟಿ ವಂದಿಸಿದರು.

 

Related Articles

error: Content is protected !!