ಕುಂದಾಪುರ : ಮೇ 1ರಂದು ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿ ಐ ಟಿ ಯು ವತಿಯಿಂದ ಕುಂದಾಪುರದ ನಗರದಲ್ಲೇಡೆ ವಿವಿಧ ಪ್ರಖಂಡಗಳ ಕಾರ್ಮಿಕರ ಮೆರವಣಿಗೆ ನಡೆಯಿತು ನಗರದ ಶಾಸ್ತ್ರಿ ಪಾರ್ಕ್ ಸಮೀಪದ ತಾಲೂಕು ಪಂಚಾಯತ್ ನ ಎದುರುಗಡೆಯಲ್ಲಿ ಸಿಐಟಿಯು ವತಿಯಿಂದ ಸಭಾ ಕಾರ್ಯಕ್ರಮ ನಡೆಯಿತು ಸಿಐಟಿಯು ಜಿಲ್ಲಾ ಕಾರ್ಯದರ್ಶಿ, ಸುರೇಶ್ ಕಲ್ಲಾಗರ್ ಮಾತನಾಡಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರಕಾರವು ಕಾರ್ಮಿಕರ ಬದುಕನ್ನು ಕಸಿಯಲು ಹೊರಟಿದೆ ಎಂದು ಆರೋಪಿಸಿದರು ವೇದಿಕೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಹಾಬಲ ಓಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ್ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಎಸ್ ನರಸಿಂಹ ತಾಲೂಕು ಸಂಚಾಲಕ ಚಂದ್ರಶೇಖರ ಮುಂತಾದವರು ಉಪಸ್ಥಿತರಿದ್ದರು ಚಂದ್ರಶೇಖರ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸಂತೋಷ್ ಹೆಮ್ಮಾಡಿ ಸ್ವಾಗತಿಸಿದರು