ಉಡುಪಿ: ಎರಡು ತಿಂಗಳ ಹಿಂದೆ ನಗರದ ಕುಂಜಿಬೆಟ್ಟುವಿನಲ್ಲಿ ಪುಂಡರ ಎರಡು ಗುಂಪುಗಳು ತಡರಾತ್ರಿ ತಲ್ವಾರ್ ಬೀಸಿಕೊಂಡು ಗ್ಯಾಂಗ್ ವಾರ್ ನಡೆಸಿದ ಪ್ರಕರಣದಲ್ಲಿನ ಆರೋಪಿಯೊಬ್ಬನಿಗೆ ಹಣಕಾಸು ಸಹಾಯ ಹಾಗೂ ಆಶ್ರಯ ನೀಡಿದ ಆರೋಪದಲ್ಲಿ ಗುರುವಾರ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಬಂಟ್ವಾಳದ ಸಫರಾ (35) ಬಂಧಿತ ಮಹಿಳೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ನಡೆದ ಗ್ಯಾಂಗ್ ವಾರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ. ಬಳಿಕ ಪೊಲೀಸ್ ತನಿಖೆಯಲ್ಲಿ ಇವರೆಲ್ಲಾ ಗರುಡ ಗ್ಯಾಂಗಿನವರೆಂದು ತಿಳಿದು ಬಂದಿತ್ತು. ಇದೇ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಇಸಾಕ್ಗೆ, ಮಹಿಳೆಯು ಆಶ್ರಯ ಹಾಗೂ ಹಣಕಾಸು ಸಹಾಯ ಮಾಡಿದ್ದಳು ಎಂದು ತನಿಖೆಯಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಆಕೆಯನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಜು.19 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಆರೋಪಿ ಇಸಾಕ್ ಪತ್ತೆಯಾಗಿಲ್ಲ