ಕಾಪು : ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 92ನೇ ಹೇರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 10 ಸೈಂಟ್ಸ್ ಜಾಗವನ್ನು ದಾನದ ರೂಪದಲ್ಲಿ ನೀಡಿರುವ ಗಣೇಶ್ ಕರ್ಕೇರ ಅವರನ್ನು ದಿನಾಂಕ 01-02-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸನ್ಮಾನಿಸಿದರು.
ಸರ್ಕಾರಿ ಜಾಗವನ್ನೇ ಕಬಳಿಸುವ ಈ ಕಾಲದಲ್ಲಿ ಸರ್ಕಾರಿ ಕಟ್ಟಡಕ್ಕೆ ತಮ್ಮ ಸ್ವಂತ ಜಾಗವನ್ನು ದಾನವಾಗಿ ನೀಡಿದ ಗಣೇಶ್ ಕರ್ಕೇರ ಅವರ ಸಮಾಜಮುಖಿ ಕಾರ್ಯವನ್ನು ಶಾಸಕರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಮಂಜುಳಾ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಮಧುಸೂದನ್ ಸಾಲ್ಯಾನ್, ಸಂದೀಪ್ ರಾವ್, ವಿಜಯ್ ಧೀರಜ್, ಹೇರೂರು ಶಕ್ತಿ ಕೇಂದ್ರದ ನಿತ್ಯಾನಂದ ಆಚಾರ್ಯ, ಬೂತ್ ಅಧ್ಯಕ್ಷರಾದ ಅಭಿಷೇಕ್ ದೇವಾಡಿಗ, ಮಜೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ಶೆಟ್ಟಿ ಹೇರೂರು, ಸ್ಥಳೀಯ ದೀನೇಶ್ ದೇವಾಡಿಗ, ಶೈಲಜಾ ಪೂಜಾರಿ, ಅನಿಲ್ ಪೂಜಾರಿ, ಮನೋಹರ್, ಯತೀಶ್ ಶೆಟ್ಟಿ, ಶ್ರೀನಿವಾಸ್ ದೇವಾಡಿಗ, ಗಣಪತಿ ಆಚಾರ್ಯ, ಸುರೇಶ್ ಪೂಜಾರಿ, ಶಂಕರ್ ದೇವಾಡಿಗ, ನಳಿನಾಕ್ಷಿ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.