Home » ಬೋನಿಗೆ ಬಿದ್ದ ಹೆಣ್ಣು ಚಿರತೆ
 

ಬೋನಿಗೆ ಬಿದ್ದ ಹೆಣ್ಣು ಚಿರತೆ

by Kundapur Xpress
Spread the love

ಗೋಳಿಯಂಗಡಿ : ಬೆಳ್ಳೆ ಗ್ರಾಪಂ ವ್ಯಾಪ್ತಿಯ ಆರ್ಡಿ ಗಂಟುಬೀಳು ಎಂಬಲ್ಲಿ 3 ವರ್ಷದ ಹೆಣ್ಣು ಚಿರತೆಯೊಂದು ಬೋನಿಗೆ  ಬಿದ್ದಿದೆ.

ಹಲವು ದಿನಗಳಿಂದ ಗಂಟುಬೀಳು ಪ್ರದೇಶದಲ್ಲಿ ಚಿರತೆ ಓಡಾಡುತ್ತಿದ್ದು, ಸಾಕುನಾಯಿ, ದನಕರುಗಳನ್ನು ಹಿಡಿದು ತಿಂದಿದೆ ಈ ಬಗ್ಗೆ  ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು

ಅರಣ್ಯ ಇಲಾಖೆಯವರು ಕಳೆದ 4 ದಿನಗಳಿಂದ ಬೋನು ಇಟ್ಟಿದ್ದು, ಶನಿವಾರ ಚಿರತೆ ಬೋನಿನಲ್ಲಿ ಬಂಧಿಯಾಗಿದೆ. ಕಾರ್ಯಾಚರಣೆಯಲ್ಲಿ ಅಲ್ದಾಡಿ ಉಪ ವಲಯಾರಣ್ಯಾಧಿಕಾರಿ ಹೇಮಾ, ಅಲ್ಪಾಡಿ ಗಸ್ತು ಅರಣ್ಯಪಾಲಕ ಶ್ರೀಕಾಂತ್, ಮಡಾಮಕ್ಕಿ ಗಸ್ತು ಅರಣ್ಯಪಾಲಕ ಮಲ್ಲಯ್ಯ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು

 

Related Articles

error: Content is protected !!