Home » ಚಿನ್ನದ ಸರ ಕಳವು
 

ಚಿನ್ನದ ಸರ ಕಳವು

by Kundapur Xpress
Spread the love

ಕುಂದಾಪುರ : ಕೊಲ್ಲೂರು ದೇವಳಕ್ಕೆ  ಆಗಮಿಸಿದ್ದ, ಭಕ್ತಿಯೊಬ್ಬರ ಚಿನ್ನದ ಸರ ಕಳವಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಬ್ರಿ ತಾಲೂಕು ಮುದ್ರಾಡಿ ನಿವಾಸಿ ಜಯಂತಿ ಎಂಬವರೇ ಚಿನ್ನದ ಸರವನ್ನು ಕಳೆದುಕೊಂಡವರು

ಮಕ್ಕಳೊಂದಿಗೆ ಕೊಲ್ಲೂರಿಗೆ ಆಗಮಿಸಿದ್ದ ಅವರು ದೇವರ ದರ್ಶನದ ಬಳಿಕ ವೀರಭದ್ರ ದೇವರ ಗುಡಿಗೆ ಬಂದು ಕೈಮುಗಿಯುವ ವೇಳೆ ನೂಕುನುಗ್ಗಲು ಉಂಟಾಗಿದ್ದು, ದೇವರಿಗೆ ಕೈಮುಗಿದು ಬರುವಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಇಲ್ಲದಿರುವುದನ್ನು ನೋಡಿ ಮಗಳು ತಿಳಿಸಿದ್ದಾರೆ. ದೇವರಿಗೆ ಕೈಮುಗಿಯುವ ವೇಳೆ ಯಾರೊ ಕಳ್ಳರು 5 ಪವನು ತೂಕದ ಚಿನ್ನದ ಸರ ಕಳವು ಮಾಡಿದ್ದಾರೆ ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

 

Related Articles

error: Content is protected !!