Home » ಕುಂದಾಪುರದಲ್ಲಿ ಹಲಸು ಮಾವು ಮತ್ತು ಕೃಷಿ ಮೇಳ
 

ಕುಂದಾಪುರದಲ್ಲಿ ಹಲಸು ಮಾವು ಮತ್ತು ಕೃಷಿ ಮೇಳ

ಮೇ 16 ರಿಂದ 18 ರ ತನಕ

by Kundapur Xpress
Spread the love

ಕುಂದಾಪುರ : ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ನೇತೃತ್ವದಲ್ಲಿ ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಮೇ 16ರಿಂದ ಮೇ 18ರವರೆಗೆ ನಗರದ ನೆಹರೂ ಮೈದಾನದಲ್ಲಿ ಹಲಸು, ಮಾವು ಹಾಗೂ ಕೃಷಿ ಮೇಳ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷ ಜನನಿ ದಿನಕರ ಶೆಟ್ಟಿ ತಿಳಿಸಿದ್ದಾರೆ.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ  ಕಳೆದ ಬಾರಿ 25ರಿಂದ 40 ಸಾವಿರ ಗಿಡಗಳನ್ನು ಜನ ಖರೀದಿಸಿದ್ದಾರೆ. ದೇಶದಲ್ಲಿ ಕಳೆದ ವರ್ಷ ಹಲಸು ಉತ್ಪನ್ನಗಳ ಮೂಲಕ 4,500 ಕೋ.ರೂ. ವ್ಯವಹಾರ ನಡೆದಿದೆ. ಆದ್ದರಿಂದ ಹಲಸಿನ ಮಾರುಕಟ್ಟೆ ವಿಸ್ತಾರವಾಗಿದೆ ಹಾಗೂ ವಿಶಾಲವಾಗಿದೆ ಎಂದರು. ಲಯನ್ಸ್ ಕ್ಲಬ್, ಕುಂದಾಪುರ ಕ್ರೌನ್ ಸ್ಥಾಪಕಾಧ್ಯಕ್ಷ ಕಿರಣ್ ಕುಂದಾಪುರ ಮಾತನಾಡಿ 125ರಷ್ಟು ಮಳಿಗೆಗಳು ಇರಲಿದ್ದು 10ಕ್ಕೂ ಅಧಿಕ ಮಂದಿ ಸಾಧಕ ಕೃಷಿಕರನ್ನು ಸಮ್ಮಾನಿಸಲಾಗುವುದು ಎಂದರು. ಪೂರ್ವಾಧ್ಯಕ್ಷ ಮಹಮದ್ ಆಶ್ರಫ್ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಹಲಸು ಮಾವು ಮೇಳದ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು

 

Related Articles

error: Content is protected !!