Home » ಶ್ರೀ ಚನ್ನಬಸವೇಶ್ವರ ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆ.
 

ಶ್ರೀ ಚನ್ನಬಸವೇಶ್ವರ ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆ.

by Kundapur Xpress
Spread the love

ಬೈಂದೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಲ್ಪನೆಯಂತೆ ಸ್ವಾವಲಂಬನ ಜೀವನ ನಡೆಸುವ ಮತ್ತು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ನಾಯಕವಾಡಿಯ ಬಳಿ 1955 ರಲ್ಲಿ ನಮ್ಮ ಹಿರಿಯರು ಸಣ್ಣ ಮಡಲಿನ ಚಪ್ಪರದಲ್ಲಿ ಶ್ರೀ ಚನ್ನಬಸವೇಶ್ವರ ಭಜನಾ ಮಂಡಳಿ ನಿರ್ಮಾಣ ಮಾಡಿ ಈ ಸಂಸ್ಥೆಯು ಹಲವು ಏಳುಬೀಳುಗಳನ್ನು ಕಂಡು ಹಂತ ಹಂತವಾಗಿ ಬೆಳೆದು 2003ರಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನ ನಿರ್ಮಾಣ ಮಾಡಿರುತ್ತಾರೆ,ಇದರ ಅಂಗ ಸಂಸ್ಥೆಯಾಗಿ ನಮ್ಮ ಹಿರಿಯರು ಯುವಕರನ್ನ ಒಗ್ಗೂಡಿಸುವ ನಿಟ್ಟಿನಲ್ಲಿ 1974ರಲ್ಲಿ ವಿಶ್ವಗುರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ದೇಹ ವಾಕ್ಯದೊಂದಿಗೆ ಶ್ರೀ ಚನ್ನಬಸವೇಶ್ವರ ಯುವಕ ಮಂಡಲ ಸ್ಥಾಪನೆ ಮಾಡಿರುತ್ತಾರೆ ಈ ಯುವಕ ಮಂಡಲವು ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ವಿವಿಧ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದರೊಂದಿಗೆ ಉಡುಪಿ ಜಿಲ್ಲೆಯಾದ್ಯಂತ ತನ್ನ ಹೆಸರನ್ನು ಪಸರಿಸಿರುತ್ತದೆ.

ಈ ಯುವಕ ಮಂಡಲಕ್ಕೆ ಪ್ರಸ್ತುತ ಸಾಲಿನಲ್ಲಿ 50ರ ಸಂಭ್ರಮ. ಇದರ ಮೊದಲ ಅಂಗವಾಗಿ ಸುವರ್ಣ ಸಂಭ್ರಮ ಆಚರಣೆಯ ಲಾಂಛನ ಬಿಡುಗಡೆ ಕಾರ್ಯಕ್ರಮಕ್ಕೆ ಇಂದು ಸಾಕ್ಷಿಯಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚನ್ನಬಸವೇಶ್ವರ ಯುವಕ ಮಂಡಲ ( ರಿ) ನಾಯಕವಾಡಿ ಅಧ್ಯಕ್ಷ ಶ್ರೀಧರ್ ಎನ್. ವಹಿಸಿದ್ದರು.ಉದ್ಯಮಿ ಮಂಜುನಾಥ್ ಜಿ ಟಿ ಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬಹುಮುಖ್ಯ ಘಟಕವಾಗಿ ಶ್ರೀ ಚನ್ನಬಸವೇಶ್ವರ ಯುವಕ ಮಂಡಲ (ರಿ )ನಾಯಕವಾಡಿ ಇದರ 50ರ ಸಂಭ್ರಮದ ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆ ಉದ್ಯಮಿ ಶ್ರೀ ಎಚ್ .ರಾಮ ನಾಯ್ಕ್ ಲಾಂಛನ ಬಿಡುಗಡೆ ಮಾಡಿದರು.

ನರೇಂದ್ರ ಎಸ್. ಗಂಗೊಳ್ಳಿ ಉಪನ್ಯಾಶಕರು ವಿಜ್ಞಾಪನ ಪತ್ರ ಬಿಡುಗಡೆ ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಘುರಾಮ್ ಟಿ. ಶ್ರೀ ಸಂಗಮೇಶ್ವರ ದೇವಸ್ಥಾನದ ಅಧ್ಯಕ್ಷರು. ಚಂದ್ರಕಾಂತ್ ಕೆ. ಶ್ರೀ ಸಂಗಮೇಶ್ವರ ದೇವಸ್ಥಾನದ ಮೋಕ್ತೇಸರರು. ನಾರಾಯಣ ಕೆ. ಶ್ರೀ ಸಂಗಮೇಶ್ವರ ದೇವಸ್ಥಾನದ ಕಾರ್ಯದರ್ಶಿಗಳು.
ರವೀಂದ್ರ ಟಿ. ಶ್ರೀ ಚನ್ನಬಸವೇಶ್ವರ ಯುವಕ ಮಂಡಲದ ಗೌರವಾಧ್ಯಕ್ಷರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆ ರಾಜು ಮಾಸ್ಟರ್ ನೆರವೇರಿಸಿದರು, ಪ್ರಸ್ತಾವಿಕ ಭಾಷಣ ಹಾಗೂ ಧನ್ಯವಾದ ನಿತೀಶ್ ಎನ್ .ಡಿ ಸ್ವಾಗತ ಗಣೇಶ್ ಕುಮಾರ್ ಮಾಡಿದರು.ಶ್ರೀ ಚನ್ನಬಸವೇಶ್ವರ ಯುವಕ ಮಂಡಲ ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡಿದವರು ಉದ್ಯಮಿ ವೈಷ್ಣವಿ ಗೋಪಾಲ್ ಚಂದನ್.ಕಾರ್ಯಕ್ರಮದಲ್ಲಿ ಸ್ಥಳೀಯ ಸಾರ್ವಜನಿಕರು, ದಲಿತ ಮುಖಂಡರು, ಶ್ರೀ ಚನ್ನಬಸವೇಶ್ವರ ಯುವಕ ಮಂಡಲ ಸರ್ವಸದಸ್ಯರು, ಶ್ರೀ ಸಂಗಮೇಶ್ವರ ದೇವಸ್ಥಾನದ ಪದಾಧಿಕಾರಿಗಳು ಹಾಜರಿದ್ದರು

   

Related Articles

error: Content is protected !!