ಕುಂದಾಪುರ :ಇನ್ನು 3-4 ತಿಂಗಳಿನೊಳಗೆ ಲೋಕಸಭಾ ಚುನಾವಣೆಗಳು ನಡೆಯಲಿದ್ದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸುತ್ತಾರೆ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಎನ್ನುವಲ್ಲಿ ಈಗಾಗಲೇ ಉಭಯ ಪಕ್ಷಗಳಲ್ಲಿ ಹಲವಷ್ಟು ಊಹಾಪೋಹಗಳು ಕುತೂಹಲ ಹುಟ್ಟಿಸುತ್ತಿವೆ ವಾಟ್ಸಾಪ್ ಗ್ರೂಪ್ , ಮಾಧ್ಯಮ ಪ್ರಸಾರ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಯ ಬಗ್ಗೆ ದೊಡ್ಡ ಮಟ್ಟದ ಸಂಚಲನ ಉಂಟು ಮಾಡಿದೆ
ಜನವರಿ ತಿಂಗಳಿನಲ್ಲಿ ಉಡುಪಿಯಲ್ಲಿ ಗೀತಾ ಪರ್ಯಾಯದ ಮಹಾ ಉತ್ಸವ ಹಾಗೂ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉಧ್ಘಾಟನೆ ನಡೆಯಲಿದ್ದು ದೇಶದ ನಾಗರಿಕರೆಲ್ಲರೂ ಧಾರ್ಮಿಕ ಉತ್ಸವದಲ್ಲಿ ಮುಳುಗಿದರೂ ಕೂಡ ಈ ಭಾರಿಯ ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಎಂಬ ಕೂತೂಹಲ ಗರಿಗೆದರಿದೆ
ಅನೇಕ ರೀತಿಯ ಆಶ್ಚರ್ಯಕರ ಬದಲಾವಣೆಗಳಿಗೆ ಹೆಸರಾದ ಬಿಜೆಪಿ ಈ ಭಾರಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆಯೇ ಅಧವಾ ಮತ್ತೆ ಶೋಭಾ ಕರಂದ್ಲಾಜೆಯೇ….? ಜನ ವಿರೋಧ ಇದ್ದರೂ ಶೋಭಾ ಕರಂದ್ಲಾಜೆ ಅವರಿಗೆ ಮತ್ತೆ ಟಿಕೆಟ್ ಕೊಡ್ತಾರ ? ಅಥವಾ ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಆಕಾಂಕ್ಷಿಯಾದ ಸಿ ಟಿ ರವಿ ಅವರಿಗೆ ಕೊಡ್ತಾರ ? ಅಥವಾ ಕೊನೆ ಉಸಿರಿರೋವರೆಗೂ ನಾನು ಬಿಜೆಪಿಗಾಗಿ ದುಡಿತೆನೆ ಎಂದು ಹಲವಾರು ಬಾರಿ ಘೋಷಣೆ ಮಾಡಿರುವ ಯುವ ನಾಯಕ ಹಾಗೂ ಮೋಗವೀರ ಸಮಾಜದ ಮುಖಂಡರಾದ ಪ್ರಮೋದ್ ಮಧ್ವರಾಜ್ ಅವರಿಗೆ ಕೊಡ್ತಾರ ಎಂದು ಕಾದು ನೋಡಬೇಕಷ್ಟೇ……
ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯ ಬಗ್ಗೆ ಕೂತೂಹಲವಿದ್ದು ಕಾಂಗ್ರೆಸ್ ನಿಂದ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ಫಿಕ್ಸ್ ಎಂದು ಎಲ್ಲಾ ಕಡೆ ಈಗಾಗಲೇ ಸುದ್ದಿ ಹರಿದಾಡುತ್ತಿದೆ, ಬಹು ಜನ ಬೆಂಬಲ ಇರುವ ಜೆ ಪಿ ಹೆಗ್ಡೆ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕಿದ್ರೆ ಬಿಜೆಪಿ ಇಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಟ್ರೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಗೆದ್ದೇ ಗೆಲ್ಲುತದೆ ಎಂದು ಎಲ್ಲಾ ಕಡೆ ಸುದ್ದಿ ವ್ಯಾಪಕ ಪ್ರಚಾರದಲ್ಲಿದೆ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ
ಉಡುಪಿ ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಪ್ರಮೋದ್ ಮಧ್ವರಾಜ್ ರವರ ಹುಟ್ಟು ಹಬ್ಬದಂದು ರಕ್ತದಾನ ಶಿಬಿರಗಳು ನಡೆದಿದ್ದು ಮುಂದಿನ ಚುನಾವಣೆಗೆ ಪ್ರಮೋದ್ ಮಧ್ವರಾಜ್ ಅಭ್ಯರ್ಥಿ ಆಗಬೇಕೆಂಬ ಕೂಗು ಕೂಡ ಬಹುದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ