ಮೂಡ್ಲಕಟ್ಟೆ : ಎಂ ಐ ಟಿ ಕುಂದಾಪುರದ ಎಂ ಬಿ.ಎ ವಿಭಾಗದ 4 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಐಡಿಯೇಷನ್ ಇನ್ ಇನ್ನೋವೇಶನ್ ಆಂಡ್ ಡಿಸೈನ್ ಥಿಂಕಿಂಗ್ ವಿಷಯದ ಮೇಲೆ ಒಂದು ದಿನದ ಕಾರ್ಯಗಾರ ನಡೆಯಿತು.ಡಾ.ಮಹಮ್ಮದ್ ಜುಬೇರ್ ಚೀಫ್ ಇನ್ನೋವೇಶನ್ ಆಫೀಸರ್ (CIO) ಮಾಹೆ, ಮಣಿಪಾಲ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ವಿಭಿನ್ನತೆ ಹೊಸತನ ಆವಿಷ್ಕಾರದ ಮನೋಭಾವನೆ ಇರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರಲ್ಲದೆ ಹೊಸ ಸಂಶೋಧನೆ ಹೇಗಿರಬೇಕೆಂದು ಎಂ ಐ ಟಿ ಇನ್ನೋವೇಶನ್ ಸೆಂಟರ್ ನ ಉದಾರಣೆಯೊಂದಿಗೆ ಹೇಳಿದರು.ಈ ಕಾರ್ಯಗಾರಕ್ಕೆ ಐ.ಎಂ.ಜೆ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ ಯವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.ಈ ಸಂದರ್ಭದಲ್ಲಿ ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ , ಉಪನ್ಯಾಸಕರು ದ್ವಿತೀಯ ಎಂ.ಬಿ.ಎ ವಿಭಾಗದ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.ಜೋವಿಯಲ್ ಫೆರ್ನಾಂಡಿಸ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.