198
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ
ಕಾಪು : ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಾನಂದ ಪ್ರಭು ಅವರ ಮನೆಗೆ ಹಾನಿ ಉಂಟಾಗಿದ್ದು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿಗಳಾದ ಮಾಲಿನಿ ಇನ್ನಂಜೆ, ಪಾಂಗಾಳ ಶಕ್ತಿ ಕೇಂದ್ರ ಸಂಚಾಲಕರಾದ ಪ್ರವೀಣ್ ಶೆಟ್ಟಿ, ಸಹ ಸಂಚಾಲಕರಾದ ದಿವೇಶ್ ಶೆಟ್ಟಿ, ಸ್ಥಳೀಯರಾದ ರವಿಪ್ರಸಾದ್, ಗಣೇಶ್ ಆಚಾರ್ಯ, ಮಹೇಶ್ ಪೂಜಾರಿ, ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು

