ಕೋಟ: ಯಕ್ಷಗಾನ ಕ್ಷೇತ್ರದಲ್ಲಿ ನಾಗೂರ್ ಕುಟುಂಬದ ಕೊಡುಗೆ ಅನನ್ಯವಾದ್ದು ಸಂಪ್ರದಾಯ ಬದ್ಧ ಕಲೆಯನ್ನು ಮೈಗೂಡಿಸಿಕೊಂಡು ಯಕ್ಷಕ್ಷೇತ್ರಕ್ಕೆ ತನ್ನದೆ ಆದ ಅಸ್ತಿತ್ವವನ್ನು ಉಳಿಸಿಕೊಂಡವರು ಎಂದು ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿಯ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ಅಭಿಪ್ರಾಯಪಟ್ಟರು. ಭಾನುವಾರ ಕೋಟದ ಅಮೃತೇಶ್ವರಿ ಸಭಾಂಗಣದಲ್ಲಿ ಹಮ್ಮಿಕೊಂಡ ಪ್ರಸಿದ್ಧ ಸ್ತ್ರೀ ವೇಷದಾರಿ ಮಾಧವ ಜೋಗಿ ನಾಗೂರ್ ಯಕ್ಷಹೆಜ್ಜೆಗೆ ರಜತ ಸಂಭ್ರಮದ ಹಿನ್ನಲ್ಲೆಯಲ್ಲಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಲಾಕ್ಷೇತ್ರದಲ್ಲಿ ಸಾಕಷ್ಟು ಕಲಾವಿದರು ತಮ್ಮ ವಯಕ್ತಿಕ ಜೀವನವನ್ನು ಮರೆತು ಕಲೆಯಲ್ಲೆ ಸುಖ ಕಂಡು ನೈಪುಣ್ಯತೆ ಸಾಧಿಸಿದ್ದಾರೆ, ಆದರೆ ಅವರ ವಯಕ್ತಿಕ ಬದುಕಿನಲ್ಲಿ ಆರ್ಥಿಕತೆಯ ನಿರ್ವಹಣೆಯಲ್ಲಿ ಶೋಚನೀಯ ಸ್ಥಿತಿ ತಲುತ್ತಾರೆ, ಇವರ ಬಗ್ಗೆ ಯಾರೊಬ್ಬರು ಕಣ್ಣಾಯಿಸದ ಸ್ಥಿತಿ ನಿರ್ಮಾಣಗೊಳ್ಖುತ್ತದೆ ಅದಕ್ಕಾಗಿ ನಾವೆಲ್ಲ ಕಲಾವಿದರ ಬದುಕಿಗಾಗಿ ಒಗ್ಗೂಡಿ ನೆರವಾಗೋಣ ಅವರ ಕಲೆಗೆ ಮತ್ತಷ್ಟು ಪೆÇ್ರೀತ್ಸಾಹದ ಬೀಜ ಬಿತ್ತೋಣ ಎಂದರು. ಸಭೆಯಲ್ಲಿ ಲೇಖಕ ರಾಘವ ಶೆಟ್ಟಿ ಬೇಳೂರು,ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್,ಅಮೃತೇಶ್ವರ ಮೇಳದ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ,ಯಕ್ಷಕಲಾವಿದ ಕೋಡಿ ವಿಶ್ವನಾಥ ಗಾಣಿಗ,ಕೋಟ ಅಮೃತೇಶ್ವರಿ ಮೇಳದ ವ್ಯವಸ್ಥಾಪಕ ಕೋಟ ಸುರೇಶ್ ಬಂಗೇರ,ಹೋಟೆಲ್ ಉದ್ಯಮಿ ವೆಂಕಟೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ಚಿಂತಕ ಕೋಟ ಚಂದ್ರಯ್ಯ ಆಚಾರ್ ಸ್ವಾಗತಿಸಿ ನಿರೂಪಿಸಿದರು.ಯಕ್ಷಕಲಾವಿದ ಮಾಧವ ಜೋಗಿ ನಾಗೂರು ವಂದಿಸಿದರು.